ಬೀದರ್‌ನ ಜನವಾಡ ಗ್ರಾಮದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿದ 8 ಅಡಿ ಉದ್ದದ ಮೊಸಳೆ
ಬೀದರ್: ಕೆರೆಯ ಕಡೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆ ಎಂಟ್ರಿ ಕೊಟ್ಟ ಘಟನೆ ಬೀದರ್ (Bidar) ತಾಲೂಕಿನ ಜನವಾಡ (Janawad) ಗ್ರಾಮದಲ್ಲಿ ನಡೆದಿದೆ. ಬೃಹತ್ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ...

ಬೀದರ್ ತಾಲೂಕಿನ ಜನವಾಡ ಗ್ರಾಮದ ಕೆರೆಯಿಂದ ಹೊರಬಂದ ಬೃಹತ್ ಮೊಸಳೆಯೊಂದು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿದೆ. ಸುಮಾರು 8 ಅಡಿ ಉದ್ದ ಮತ್ತು ಎರಡು ಕ್ವಿಂಟಾಲ್ ತೂಕದ ಈ ಮೊಸಳೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆಹಿಡಿದರು. ಕೆರೆಯಲ್ಲಿ ಇನ್ನೂ ಹೆಚ್ಚಿನ ಮೊಸಳೆಗಳಿರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಗ್ರಾಮದ ಜನರಿಗೆ ಸೂಚನೆ ನೀಡಿದ್ದಾರೆ.




