ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಸುದ್ದಿ

ಬಳ್ಳಾರಿ ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ರೂ. ವಿಮೆ ಹಣ ದುರುಪಯೋಗ

ಬಳ್ಳಾರಿ: ಇಲ್ಲಿನ (Ballari) ರಾಬಕೊವಿ ಹಾಲು ಒಕ್ಕೂಟದಲ್ಲಿ ಸತ್ತ ಹಸುಗಳ ವಿಮೆ ಹಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Corruption) ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಜಾನುವಾರ ವಿಮೆ ಮತ್ತು ಪರಿಹಾರದ 16.5 ಕೋಟಿ ರ...

· ಬಳ್ಳಾರಿ
ಹಸುಗಳ ವಿಮೆ ಹಣದಲ್ಲಿ 16.5 ಕೋಟಿ ಗುಳುಂ – ರಾಬಕೊವಿ ಹಾಲು ಒಕ್ಕೂಟದಲ್ಲಿ ಭಾರೀ ಭ್ರಷ್ಟಾಚಾರ ಆರೋಪ
ಹಂಚಿಕೊಳ್ಳಿ:

ಬಳ್ಳಾರಿಯ ರಾಬಕೊವಿ ಹಾಲು ಒಕ್ಕೂಟದಲ್ಲಿ ಮೃತ ಜಾನುವಾರುಗಳ ವಿಮಾ ಪರಿಹಾರದ ಹಣವನ್ನು ಲಪಟಾಯಿಸಿದ ಆರೋಪ ಕೇಳಿಬಂದಿದೆ. 2018 ರಿಂದ 2026ರ ಅವಧಿಯಲ್ಲಿ ರೈತರಿಗೆ ತಲುಪಬೇಕಿದ್ದ 16.5 ಕೋಟಿ ರೂ.ಗೂ ಅಧಿಕ ಹಣವನ್ನು ಒಕ್ಕೂಟದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ನಿರ್ದೇಶಕ ಧನಂಜಯ ಹಮಾಲ್ ದೂರು ನೀಡಿದ್ದಾರೆ. ಈ ಹಣವನ್ನು ಅಕ್ರಮವಾಗಿ ಬೇರೆಯವರ ಖಾತೆಗಳಿಗೆ ವರ್ಗಾಯಿಸಿ ವೈಯಕ್ತಿಕ ಲಾಭಕ್ಕೆ ಬಳಸಲಾಗಿದೆ ಎಂಬುದು ದೂರಿನ ಸಾರಾಂಶವಾಗಿದೆ. ಈ ಹಿನ್ನೆಲೆಯಲ್ಲಿ ಎಂಡಿ ಎಸ್. ಸುದರ್ಶನ ರೆಡ್ಡಿ ಸೇರಿದಂತೆ ಆರು ಮಂದಿ ಅಧಿಕಾರಿಗಳ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಂಚಿಕೊಳ್ಳಿ: