ಆಂಧ್ರದ ನೇರಣಿಕೆ ಜಾತ್ರೆಯಲ್ಲಿ ಬಡಿಗೆ ಕಾಳಗ: ಪೋತರಾಜು ಸಾವು, 80 ಮಂದಿಗೆ ಗಾಯ
– 80 ಜನರಿಗೆ ಗಾಯ, 8 ಜನರ ಸ್ಥಿತಿ ಗಂಭೀರ ಬಳ್ಳಾರಿ: ಆಂಧ್ರದ (Andhra Pradesah) ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ನಡೆಯುವ ಬಡಿಗೆ ಕಾಳಗದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ...

ಆಂಧ್ರಪ್ರದೇಶದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯ ಸಂದರ್ಭದಲ್ಲಿ ನಡೆದ ಬಡಿಗೆ ಕಾಳಗವು ಹಿಂಸಾತ್ಮಕ ರೂಪ ಪಡೆದಿದೆ. ಈ ಘಟನೆಯಲ್ಲಿ ಪೋತರಾಜು ಎಂಬ ಭಕ್ತ ಮೃತಪಟ್ಟಿದ್ದು, ಸುಮಾರು 80 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಎಂಟು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ಒಯ್ಯುವ ವಿಚಾರದಲ್ಲಿ ಭಕ್ತರ ನಡುವೆ ನಡೆದ ಈ ಸಂಘರ್ಷವನ್ನು ನಿಯಂತ್ರಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ.




