ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಜೀವನಶೈಲಿ

ವಿಶ್ವದ ಬೆಸ್ಟ್ ವಿಸ್ಕಿ 'ಇಂದ್ರಿ'ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಭಾರತದಲ್ಲಿ ಬಿಡುಗಡೆ, ಬೆಂಗಳೂರಲ್ಲೂ ಸಿಗುತ್ತೆ

ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಖ್ಯಾತಿಯ 'ಇಂದ್ರಿ ಸಿಂಗಲ್ ಮಾಲ್ಟ್' ದೀಪಾವಳಿ ಪ್ರಯುಕ್ತ 'ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕೇವಲ 600 ಬಾಟಲಿಗಳು ಮಾತ್ರ ಲಭ್ಯವಿದ್ದ...

· 1 ನಿಮಿಷ ಓದು· ಬೆಂಗಳೂರು ನಗರ
ಜಗತ್ತಿನ ಬೆಸ್ಟ್ ವಿಸ್ಕಿ, 'ಇಂದ್ರಿ'ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಭಾರತದ ಮಾರುಕಟ್ಟೆಗೆ ಲಗ್ಗೆ, ಬೆಂಗಳೂರಲ್ಲೂ ಲಭ್ಯ!
ಹಂಚಿಕೊಳ್ಳಿ:

ಬೆಂಗಳೂರು: ಜಗತ್ತಿನ ಶ್ರೇಷ್ಠ ವಿಸ್ಕಿ ಎಂಬ ಮನ್ನಣೆಗೆ ಪಾತ್ರವಾಗಿರುವ, ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದ 'ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ'ಯು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ 'ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026' ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದನ್ನು ಯಶಸ್ವಿಯಾಗಿ ಅನಾವರಣಗೊಳಿಸಲಾಗಿತ್ತು. ಇದೀಗ ಭಾರತೀಯ ಗ್ರಾಹಕರಿಗಾಗಿ ಈ ವಿಶಿಷ್ಟ 'ರೂಬಿ ಪೋರ್ಟ್ ಕ್ಯಾಸ್ಕ್' ವಿಸ್ಕಿಯನ್ನು ಬಿಡುಗಡೆ ಮಾಡಲಾಗಿದೆ. ಖ್ಯಾತ ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಇದು ಸಿದ್ಧಗೊಂಡಿದೆ.

ಏನಿದರ ವಿಶೇಷತೆ? ಏಕೆ ಇದು ಅತ್ಯಪರೂಪ?

ಇದು ಸಾಮಾನ್ಯ ವಿಸ್ಕಿಯಲ್ಲ. ಇದು ಕೇವಲ ದೀಪಾವಳಿಯ ವಿಶೇಷ ಆವೃತ್ತಿಯಾಗಿದ್ದು, ಭಾರತೀಯ ಮಾರುಕಟ್ಟೆಗೆ ಕೇವಲ 600 ಬಾಟಲಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಬಾಟಲಿಯ ಮೇಲೂ ಪ್ರತ್ಯೇಕ ಸಂಖ್ಯೆಯನ್ನು ನಮೂದಿಸಲಾಗಿದೆ.

ಉತ್ತರ ಭಾರತದ ಆರು ಸಾಲಿನ ಬಾರ್ಲಿಯನ್ನು ಬಳಸಿ, ಸಾಂಪ್ರದಾಯಿಕ 'ಕಾಪರ್ ಪಾಟ್ ಸ್ಟಿಲ್ಸ್' ಮೂಲಕ ಇದನ್ನು ಭಟ್ಟಿ ಇಳಿಸಲಾಗಿದೆ. ಪೋರ್ಚುಗಲ್ ದೇಶದಿಂದ ಆಮದು ಮಾಡಿಕೊಳ್ಳಲಾದ ವಿಶೇಷ 'ರೂಬಿ ಪೋರ್ಟ್ ವೈನ್' ಪೀಪಾಯಿಗಳಲ್ಲಿ ಇದನ್ನು ಸಂಗ್ರಹಿಸಿಟ್ಟು ಹದಗೊಳಿಸಲಾಗಿದೆ.

ಈ ವಿಸ್ಕಿಯಲ್ಲಿ ಬ್ಲ್ಯಾಕ್ ಚೆರ್ರಿ, ಕಾಡು ಹಣ್ಣುಗಳು, ಹುರಿದ ಒಣ ಬೀಜಗಳು, ವೆನಿಲ್ಲಾ, ಜೇನುತುಪ್ಪ ಮತ್ತು ಅಂಜೂರದ ಹಣ್ಣಿನ ಸುವಾಸನೆ ಹಾಗೂ ರುಚಿಯ ಅದ್ವಿತೀಯ ಸಮ್ಮಿಲನವಿದೆ.

ರಾಜಮನೆತನವನ್ನು ನೆನಪಿಸುವ ಬಾಟಲಿಯ ವಿನ್ಯಾಸ

ಈ ವಿಸ್ಕಿಯ ಬಾಟಲಿ ಮತ್ತು ಪ್ಯಾಕೇಜಿಂಗ್ ಅನ್ನು 'ಇಂಡಿಯಾ ಸರ್ಕಸ್'ನ ಪ್ರಸಿದ್ಧ ವಿನ್ಯಾಸಗಾರ ಕೃಷ್ಣಾ ಮೆಹ್ತಾ ವಿನ್ಯಾಸಗೊಳಿಸಿದ್ದಾರೆ. ಭಾರತದ ರಾಜಮನೆತನದ ಹೆಮ್ಮೆ ಮತ್ತು ವೈಭವದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ, ಮಾರ್ವಾಡಿ ಕುದುರೆ ಮತ್ತು ಹೂವಿನ ಚಿತ್ರಣಗಳು ಈ ಬಾಟಲಿಯ ಮೇಲೆ ಸುಂದರವಾಗಿ ಮೂಡಿಬಂದಿವೆ.

ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳ ಸುರಿಮಳೆ

2023ರಲ್ಲಿ ಇಂದ್ರಿಯ ದಿವಾಳಿ ಕಲೆಕ್ಟರ್ಸ್ ಎಡಿಷನ್ ʼವಿಶ್ವದ ಅತ್ಯುತ್ತಮ ವಿಸ್ಕಿʼ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿತ್ತು.

ಈ ಬಾರಿಯ '2026 ಎಡಿಷನ್' ಕೂಡ ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಲಂಡನ್‌ನ 'ದಿ ವಿಸ್ಕಿ ಶೋ'ನಲ್ಲಿ ಜಾಗತಿಕ ವಿಸ್ಕಿ ತಜ್ಞರಿಂದ ಭಾರಿ ಮೆಚ್ಚುಗೆ ಗಳಿಸಿದೆ. 'ಯುಎಸ್‌ಎ ಸ್ಪಿರಿಟ್ಸ್ ರೇಟಿಂಗ್ಸ್ 2026' ರಲ್ಲಿ ಡಬಲ್ ಗೋಲ್ಡ್ (96 ಪಾಯಿಂಟ್ಸ್), ಲಂಡನ್ ಮತ್ತು ನ್ಯೂಯಾರ್ಕ್‌ನ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಪಡೆದಿದೆ. ಒಟ್ಟಾರೆಯಾಗಿ ಈ ಸರಣಿ ಬರೋಬ್ಬರಿ 29 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ!

ಭಾರತದಲ್ಲಿ ಎಲ್ಲಿ, ಯಾವಾಗ ಸಿಗಲಿದೆ ಈ ವಿಸ್ಕಿ?

'ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026' ವಿಸ್ಕಿಯು ಅಕ್ಟೋಬರ್ ಮಧ್ಯಭಾಗದಿಂದ ಭಾರತದಲ್ಲಿ ದೊರೆಯಲಿದೆ. 700 ಎಂಎಲ್ (50% ಎಬಿವಿ) ಸಾಮರ್ಥ್ಯದ ಕೇವಲ 600 ಬಾಟಲಿಗಳು ಬೆಂಗಳೂರು, ಚಂಡೀಗಢ ಮತ್ತು ಗುರುಗ್ರಾಮ್ ನಗರಗಳಲ್ಲಿ ಲಭ್ಯವಿರಲಿವೆ.

ವಿದೇಶಿ ಪ್ರಯಾಣಿಕರಿಗಾಗಿ, ಇದರ 58.5% ಎಬಿವಿ ಅಂತಾರಾಷ್ಟ್ರೀಯ ಆವೃತ್ತಿಯು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಆಯ್ದ 'ಡ್ಯೂಟಿ ಫ್ರೀ' ಮಳಿಗೆಗಳಲ್ಲಿ ಹಾಗೂ ದುಬೈ ಡ್ಯೂಟಿ ಫ್ರೀನಲ್ಲಿ ಸಿಗಲಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್, "ಇದು ಕೇವಲ ದೀಪಾವಳಿ ಆಚರಣೆಗೆ ಸೀಮಿತವಲ್ಲ. ಭಾರತದ ಸಿಂಗಲ್ ಮಾಲ್ಟ್ ವಿಸ್ಕಿ ಜಾಗತಿಕ ಮಟ್ಟದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ಎಂಬುದಕ್ಕೆ ಇದು ಸಾಕ್ಷಿ. ಅತ್ಯುತ್ತಮ ವಿಸ್ಕಿಯನ್ನು ಭಾರತದಿಂದಲೂ ಜಗತ್ತಿಗೆ ನೀಡಬಹುದು ಎಂಬುದನ್ನು ಇಂದ್ರಿ ಸಾಬೀತುಪಡಿಸಿದೆ," ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಿ: