Death Cap: ಈ ಅಣಬೆಯ ಒಂದು ಸಣ್ಣ ತುಂಡು ತಿಂದರೆ ಸಾಕು, ಪ್ರಾಣಕ್ಕೆ ಕುತ್ತು! ಆದರೆ ಇದು ವಿಷಕಾರಿ ಎಂದು ಪತ್ತೆ ಹಚ್ಚೋದು ಹೇಗೆ? ನೋಡಿ..
ಅಣಬೆಗಳು (Mushrooms) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಕಾಡಿನಲ್ಲಿ ಬೆಳೆಯುವ ಕೆಲವು ಅಣಬೆಗಳು ತುಂಬಾನೇ ಡೇಂಜರ್. ಅದರಲ್ಲಿ 'ಡೆತ್ ಕ್ಯಾಪ್' (D...

Death Cap Mushrooms: ಈ ಅಣಬೆ ಸೇವಿಸಿದರೆ ಮರಣ ಖಚಿತ, ಸಣ್ಣ ತುಂಡು ಸೇವಿಸಿದರೂ ಸಾಕು!
ಇವು ನೋಡಲು ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ಅಣಬೆಗಳಂತೆಯೇ ಭಾಸವಾಗುತ್ತವೆ. ಆದರೆ ಇದು ವಿಶ್ವದ ಅತ್ಯಂತ ಅಪಾಯಕಾರಿ ಅಣಬೆಯಾಗಿದೆ. ಇದನ್ನು 'ಡೆತ್ ಕ್ಯಾಪ್ ಮಶ್ರೂಮ್' ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಇದನ್ನು 'ಅಮಾನಿಟಾ ಫಾಲೋಯ್ಡೆಸ್' (Amanita phalloides) ಎಂದು ಕರೆಯಲಾಗುತ್ತದೆ.
ಜಗತ್ತಿನಾದ್ಯಂತ ಅಣಬೆ ವಿಷದಿಂದ ಮೃತಪಡುವವರ ಪೈಕಿ ಶೇ.90 ರಷ್ಟು ಮಂದಿ ಇದೇ ಅಣಬೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಿಳಿ ಹಳದಿ ಮತ್ತು ಹಸಿರು ಬಣ್ಣ ಹೊಂದಿರುವ ಈ ಅಣಬೆಯನ್ನು ನೀವು ಎಷ್ಟೇ ಚೆನ್ನಾಗಿ ಬೇಯಿಸಿದರೂ, ಹುರಿದರೂ ಅಥವಾ ಒಣಗಿಸಿದರೂ ಇದರಲ್ಲಿದ್ದ ವಿಷದ ಅಂಶ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.
ಕೇವಲ ಅರ್ಧ ತುಂಡು ಸೇವಿಸಿದರೂ ಸಾಕು, ಮನುಷ್ಯನ ಪ್ರಾಣ ಹೋಗುವುದು ಖಚಿತ. ಅಷ್ಟೊಂದು ಭೀಕರವಾದ ವಿಷ ಇದರಲ್ಲಿ ಅಡಗಿದೆ.
ಡೆತ್ ಕ್ಯಾಪ್ ಅಣಬೆ ತಿಂದ ಕೂಡಲೇ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಇದರಲ್ಲಿರುವ 'ಅಮಾಟಾಕ್ಸಿನ್ಸ್' (Amatoxins) ಎಂಬ ಮಾರಣಾಂತಿಕ ವಿಷಕಾರಿ ಅಂಶಗಳು ದೇಹದ ಜೀವಕೋಶಗಳ ಕಾರ್ಯವೈಖರಿಯನ್ನು ಹಾಳುಗೆಡವುತ್ತವೆ. ಸೇವಿಸಿದ 6 ರಿಂದ 12 ಗಂಟೆಗಳ ಬಳಿಕ ತೀವ್ರ ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿಕೊಂಡು ದೇಹ ದಣಿಯುತ್ತದೆ. ಮರುದಿನ ವಾಂತಿ ಕಡಿಮೆಯಾಗಿ, ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ಆದರೆ ಒಳಗಡೆ ಆ ವಿಷವು ಮೌನವಾಗಿ ಲಿವರ್ ಮತ್ತು ಕಿಡ್ನಿಗಳ ಜೀವಕೋಶಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿರುತ್ತದೆ.
ಕಾಡಿನಲ್ಲಿ ಸಿಗುವ ಅಣಬೆಗಳ ಬಗ್ಗೆ ಎಚ್ಚರ
ಕೊನೆಯ ಹಂತ ತಲುಪುವಷ್ಟರಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗಿರುತ್ತದೆ. ಲಿವರ್ ಮತ್ತು ಕಿಡ್ನಿಗಳು ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸುತ್ತವೆ. ಕಾಮಾಲೆ ರೋಗ ಉಂಟಾಗಿ, ದೇಹದ ಒಳಗೆ ರಕ್ತಸ್ರಾವ ಆರಂಭವಾಗಿ ರೋಗಿಗಳು ಕೋಮಾಗೆ ಜಾರುತ್ತಾರೆ. ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದಿದ್ದರೆ ಸಾವು ಅನಿವಾರ್ಯ. ಕಾಡಿನಲ್ಲಿ ಮರಗಳ ಬುಡದಲ್ಲಿ ಬೆಳೆಯುವ ಈ 'ಡೆತ್ ಕ್ಯಾಪ್' ಅಣಬೆಗಳನ್ನು ಸಾಮಾನ್ಯ ಅಣಬೆಗಳೆಂದು ತಪ್ಪಾಗಿ ಭಾವಿಸಿ ಅನೇಕರು ಪ್ರಾಣ ತೆರುತ್ತಿದ್ದಾರೆ. ಆದ್ದರಿಂದ ಕಾಡಿನಲ್ಲಿ ದೊರೆಯುವ ಅಪರಿಚಿತ ಅಣಬೆಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.




