ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕರ್ನಾಟಕ

ರಸ್ತೆಬದಿ ಸಸಿ ಕಿತ್ತಿದ್ದಕ್ಕೆ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ

ರಾಯಚೂರು: ರಸ್ತೆ ಬದಿಯ ಸಸಿಗಳನ್ನು ಕಿತ್ತು ಹಾಕಿದ್ದಾನೆ ಅಂತ ರೈತನ ಮೇಲೆ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಯಚೂರು (Raichuru) ಜಿಲ್ಲೆ...

· ರಾಯಚೂರು
ರಸ್ತೆಬದಿ ಸಸಿ ಕಿತ್ತಿದ್ದಕ್ಕೆ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ
ಹಂಚಿಕೊಳ್ಳಿ:

ರಾಯಚೂರು: ರಸ್ತೆ ಬದಿಯ ಸಸಿಗಳನ್ನು ಕಿತ್ತು ಹಾಕಿದ್ದಾನೆ ಅಂತ ರೈತನ ಮೇಲೆ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಯಚೂರು (Raichuru) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಯರದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸಸಿ ಹಚ್ಚಲು ಬಿಟ್ಟಿಲ್ಲಾ, ಹಚ್ಚಿದ ಸಸಿಗಳನ್ನ ಕಿತ್ತಿದ್ದಾನೆ ಅಂತ ರೈತ ರಮೇಶ ಮೇಲೆ ಹಲ್ಲೆ ಮಾಡಲಾಗಿದೆ. ಯರದೊಡ್ಡಿ ಗ್ರಾಮದ ಸರ್ವೆ ನಂ 29ರ ಜಮೀನಿನ ರಸ್ತೆ ಬದಿಯಲ್ಲಿ ಸಸಿ ಹಚ್ಚುವ ವಿಚಾರಕ್ಕೆ ಹಲ್ಲೆ ಮಾಡಲಾಗಿದೆ.

ಹೊಲದಲ್ಲಿ ಸಸಿ ನೆಡಲಾಗಿದೆ ಅಂತ ಕೆಲ ಸಸಿಗಳನ್ನ ಕಿತ್ತಿದ್ದಕ್ಕೆ ಜಗಳವಾಗಿದೆ. ಮಧ್ಯಾಹ್ನ 2 ಗಂಟೆಯಿAದ ರಾತ್ರಿವರೆಗೆ ಹಲ್ಲೆ ಮಾಡಲಾಗಿದೆ ಅಂತ ರೈತ ಆರೋಪಿಸಿದ್ದು, ಘಟನೆ ಕುರಿತು ಸಮಗ್ರ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲ್ಲೆ ಮಾಡಿದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನು, ಮದ್ಯಪಾನ ಮಾಡಿ, ಸಿಬ್ಬಂದಿ ಹಲ್ಲೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರು ಡಿಸಿಎಫ್ ಸುರೇಶ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಹಂಚಿಕೊಳ್ಳಿ: