ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಕರ್ನಾಟಕ

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹಾಸನ: ಜಿಲ್ಲಾಡಳಿತದ ನಿಷೇಧದ ಹೊರತಾಗಿಯೂ ದೇವಿಗೆರೆ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಏಕೆ ಅವಕಾಶ ನೀಡಲಾಯಿತು ಎಂಬುದಕ್ಕೆ ವಿವರಣೆ ಕೋರಿ ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ ಅವರು ಎಸ್​ಪಿ ಶುಭಾನ್ವಿತಾಗೆ ನೋ...

· ಹಾಸನ
ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ
ಹಂಚಿಕೊಳ್ಳಿ:

ಹಾಸನ: ಜಿಲ್ಲಾಡಳಿತದ ನಿಷೇಧದ ಹೊರತಾಗಿಯೂ ದೇವಿಗೆರೆ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಏಕೆ ಅವಕಾಶ ನೀಡಲಾಯಿತು ಎಂಬುದಕ್ಕೆ ವಿವರಣೆ ಕೋರಿ ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ ಅವರು ಎಸ್​ಪಿ ಶುಭಾನ್ವಿತಾಗೆ ನೋಟಿಸ್ ಜಾರಿ ಮಾಡಿದ್ದು, ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಹಾಸನ ಡಿಸಿ ಮತ್ತು ಎಸ್‌ಪಿ ನಡುವಿನ ಜಟಾಪಟಿ ಬಗ್ಗೆ ಮಾಜಿ ಸಚಿವ ಎಚ್​ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ಎರಡು ದಶಕದ ಅನುಭವವಿರುವ ಅಧಿಕಾರಿ ಸಾರ್ ಅವರು, ಅಂತಹವರ ಬಗ್ಗೆ ಮಾತನಾಡೋಕೆ ಆಗುತ್ತಾ ಎಂದಿದ್ದಾರೆ.

'ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ ಸಾರ್, ಎಸ್​ಪಿಗೆ ನೋಟಿಸ್ ಕೊಟ್ಟ ಮೇಲೆ ನಮಗೇನಾದ್ರೂ ಕೊಟ್ಟುಬಿಟ್ಟಾರು. ಅವರು ದೊಡ್ಡವರು. ಅವರ ಬಗ್ಗೆ ನಾವು ಮಾತನಾಡುವುದಿಲ್ಲ. ಎರಡು ದಶಕದ ಅಧಿಕಾರಿ ಸಾರ್ ಅವರು. ಅಂತಹವರ ಬಗ್ಗೆ ಮಾತನಾಡೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು.

ಯಾವುದೇ ಗಲಾಟೆ ಇಲ್ಲದ ಹಾಗೆ ನೋಡಿಕೊಳ್ಳುತ್ತೀನಿ ಅಂತ ಜಿಲ್ಲೆಯ ಮುಖ್ಯಸ್ಥರು ಹೇಳಿದಾಗ ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡೋಣ. ನಾನು ವಯಕ್ತಿಕವಾಗಿ ಯಾವುದು ಗಣಪತಿ ಬಿಡಲು ಹೋಗಿಲ್ಲ. ಡಿಸಿ ಎಸ್‌ಪಿಗೆ ನೋಟಿಸ್ ಕೊಟ್ಟಿರುವುದು ಗೊತ್ತಿಲ್ಲ. ಪೊಲೀಸ್ ನಮಗೆ ಬೇಡ ಜಿಲ್ಲೆಯಲ್ಲಿ ಎಲ್ಲವನ್ನು ನೋಡಿಕೊಳ್ಳುತ್ತೀವಿ ಅಂತ ಹೇಳಿದ್ದು, ನಾವು ಅವರಿಗೆ ಬೆಂಬಲ ವ್ಯಕ್ತಪಡಿಸೋಣ ಎಂದರು.

'ನಾವು ತಲೆಕೆಡಿಸಿಕೊಳ್ಳಲ್ಲ​, ಹಾಸನಾಂಬೆ ದರ್ಶನದ ವಿಚಾರಕ್ಕೂ ನಾವು ತಲೆಕೆಡಿಸಿಕೊಳ್ಳಲ್ಲ. ಎಂದಾದರೂ ಹೋದರೆ, ಕ್ಯೂನಲ್ಲಿ ಅಥವಾ ದುಡ್ಡು ಕೊಟ್ಟು ಹೋಗುತ್ತೇನೆ. ಏನೇನೆಲ್ಲ ನಡೆಸುತ್ತಾರೆ ನೋಡೋಣ. ಬೇರೆ ಅವರಿಗೆಲ್ಲ ವಿಸರ್ಜನೆಗೆ ಅನುಮತಿ ಹೇಗೆ ಕೊಟ್ಟರು. ಎಂಟು ದಿನದಿಂದ ಗಣಪತಿ ಬಿಡುವುದಕ್ಕೆ ಅನುಮತಿ ಕೊಟ್ಟಿದ್ದಾರೆ. ಆದರೆ 72 ವರ್ಷದ ಗಣಪತಿಗೆ ಯಾಕೆ ನಿರ್ಬಂಧ ಹೇರಿದ್ದಾರೆ. ಒಂದು ಸಮಾಜದ ಗಣಪತಿ, ಒಂದು ಪಕ್ಷದ ಗಣಪತಿ ಅಲ್ಲ, ಮೂರು ದಿನ ಮುಂಚೆ ಕರೆದು ತೀರ್ಮಾನ ಮಾಡಬೇಕಿತ್ತು. ರಾತ್ರಿ ಎಂಟು ಗಂಟೆಯಲ್ಲಿ ಸೆಕ್ಷನ್ 144 ಹಾಕಿದ್ರೆ ಹೇಗೆ?' ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸಮಗ್ರ ತನಿಖೆ ನಡೆಸಬೇಕು. ಗಣಪತಿ ಪ್ರತಿಷ್ಠಾಪನ ಸಂಘದವರನ್ನು ಕರೆಸಿ ಮಾತನಾಡಬೇಕಿತ್ತು. ಡಿಸಿ ಮತ್ತು ಎಸ್​ಪಿಯದ್ದು ಏನಿದೆ ನಮಗೆ ಗೊತ್ತಿಲ್ಲ, ಐತಿಹಾಸಿಕ ಗಣಪತಿಯನ್ನು ಬಿಡೋದಕ್ಕೆ ಅವಕಾಶ ಕೊಡಬೇಕಿತ್ತು. ಇನ್ನೂ ಹಲವಾರು ಸಮಸ್ಯೆಗಳು ಇವೆ. ಆದರೆ, ಹೇಗೆ ರಿಪೇರಿ ಮಾಡಬೇಕು ಎಂಬುದು ಗೊತ್ತಿಗೆ ಮಾಡೋಣ ಎಂದು ಹೇಳಿದರು.

ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ; ರಾಜ್ಯ ಸರ್ಕಾರ ದಿವಾಳಿ ಆಗಿದ್ರೆ ಕೊಡುತ್ತೇನೆ: ಎಚ್.​​ಡಿ ರೇವಣ್ಣ ತಿರುಗೇಟು

ಸಚಿವ ಕೆಎಂ ಶಿವಲಿಂಗೇಗೌಡ ವಿರುದ್ಧ ಕಿಡಿ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ ವಿರುದ್ಧವೂ ಕಿಡಿಕಾರಿದ ಅವರು, ಈಗಿನ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆಗ ನಮ್ಮ ಪಕ್ಷದಿಂದ ಸದನ ಸಮಿತಿ ಸದಸ್ಯರಾಗಿದ್ದರು. ನೈಸ್ ವಿರುದ್ಧ ವರದಿ ನೀಡಲು ನಮ್ಮ ಪಕ್ಷದ ಸದಸ್ಯರಾಗಿದ್ದರು. ನಮ್ಮ ಪಕ್ಷದಲ್ಲಿ ಯಾರೂ ಬುದ್ಧಿವಂತರು ಇಲ್ಲ ನಾನೇ ಬುದ್ಧಿವಂತ ಎಂದು ಸಮಿತಿಗೆ ಸೇರಿಕೊಂಡಿದ್ದರು ಎಂದು ಹೇಳಿದರು.

ಇಲ್ಲಿ ನಡೆದಿರುವ ಅವ್ಯವಹಾರ ಯಾರಿಗೂ ಹೇಳುವುದಕ್ಕೆ ಬರುವುದಿಲ್ಲ. ನಮ್ಮ ಪಾರ್ಟಿಯಲ್ಲಿ ನಾನೇ ಸೇರಿಕೊಳ್ಳುತ್ತೇನೆ ಎಂದು ಒತ್ತಡ ಹಾಕಿದ್ದರು. ಇದನ್ನು ಜೇನುಕಲ್ ಸಿದ್ದೇಶ್ವರ ಬೆಟ್ಟದ ಮುಂದೆ ಹೇಳಲಿ. ಯಾರ್ಯಾರು ದುಡ್ಡು ಹೊಡೆದಿದ್ದಾರೆ, ಲೂಟಿ ಮಾಡಿದ್ದಾರೆ ಎಂದು ಕುಮಾರಣ್ಣನಿಗೆ ಹೇಳಿ ಸದಸ್ಯರಾಗಿದ್ದರು. ಅವರು ಸದಸ್ಯರಾಗಿ ಏನು ಬರೆಸಿ ಬಂದಿದ್ದಾರೋ ಅದನ್ನು ಸಾರ್ವಜನಿಕರಿಗೆ ಹೇಳಲಿ ಎಂದು ಆಗ್ರಹಿಸಿದರು.

ಹಂಚಿಕೊಳ್ಳಿ: