ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಸುದ್ದಿ
ಕರ್ನಾಟಕ

ದೆಹಲಿಯಲ್ಲಿ ಪ್ರತಿಭಟನೆ ಹೆಸರಿನಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ: ವಿಎಚ್‌ಪಿ ಆರೋಪ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನೆಪದಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವ, ಕಾರ್ಮಿಕರ ದಿನಗೂಲಿ ಕಸಿಯುವ ಮತ್ತು ಬೀದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ವಿವಿಧ ವರ್ಗದ...

ದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ:ವಿಶ್ವ ಹಿಂದೂ ಪರಿಷತ್
ಹಂಚಿಕೊಳ್ಳಿ:

ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ವ್ಯಾಪಾರಿಗಳು ಮತ್ತು ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್‌ ಬನ್ಸಾಲ್‌ ದೂರಿದ್ದಾರೆ. ಕನ್ನಾಟ್‌ ಪ್ಲೇಸ್‌, ಕರೋಲ್‌ ಬಾಗ್‌ ಮತ್ತು ಸದರ್‌ ಬಜಾರ್‌ ಅಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿನ ಚಟುವಟಿಕೆಗಳು ಕುಂಠಿತವಾಗಿದ್ದು, ಹಬ್ಬದ ಸಂದರ್ಭದಲ್ಲಿ ಹಿಂದೂಗಳ ಆಚರಣೆಗೆ ಅಡ್ಡಿಪಡಿಸುವ ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿಭಟನೆಗಳ ನೆಪದಲ್ಲಿ ಆರ್ಥಿಕತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ಒತ್ತೆಯಾಳಾಗಿ ಇರಿಸುವ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಹಂಚಿಕೊಳ್ಳಿ: