ಬಾಗಲಕೋಟೆ: ವಿದ್ಯುತ್ ಬಿಲ್ ನೀಡಲು ತೆರಳಿದ್ದ ಹೆಸ್ಕಾಂ ಮೀಟರ್ ರೀಡರ್ ಮೇಲೆ ಬೀದಿ ನಾಯಿ ದಾಳಿ
ಬಾಗಲಕೋಟೆ: ನಗರದಲ್ಲಿ ಬೀದಿ ನಾಯಿಗಳ(Street Dog) ಉಪಟಳ ಮಿತಿಮೀರಿದ್ದು, ಕರ್ತವ್ಯ ನಿರತ ಹೆಸ್ಕಾಂ ಮೀಟರ್ ರೀಡರ್(Meter Reader) ಒಬ್ಬರ ಮೇಲೆ ಬೀದಿ ಶ್ವಾನವೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿ...

ಬಾಗಲಕೋಟೆ: ನಗರದಲ್ಲಿ ಬೀದಿ ನಾಯಿಗಳ(Street Dog) ಹಾವಳಿ ಮಿತಿ ಮೀರಿದ್ದು, ಕರ್ತವ್ಯದ ಮೇಲೆ ತೆರಳಿದ್ದ ಹೆಸ್ಕಾಂ ಮೀಟರ್ ರೀಡರ್(Meter Reader) ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ನಾಗಣ್ಣ ಕೋಗಿಲ್ ಗಾಯಗೊಂಡ ಮೀಟರ್ ರೀಡರ್ ಆಗಿದ್ದಾರೆ. ಬಾಗಲಕೋಟೆಯ(Bagalkote) ವಿದ್ಯಾಗಿರಿ 6ನೇ ಕ್ರಾಸ್‌ನಲ್ಲಿ ಈ ಅವಘಡ ಸಂಭವಿಸಿದೆ.
ನಾಗಣ್ಣ ಕೋಗಿಲ್ ಅವರು ಎಂದಿನಂತೆ ಮನೆಗಳಿಗೆ ವಿದ್ಯುತ್ ಬಿಲ್ ನೀಡುವ ಕೆಲಸ ನಿರ್ವಹಿಸುತ್ತಿದ್ದರು. ವಿದ್ಯಾಗಿರಿಯ 6ನೇ ಕ್ರಾಸ್ ಬಳಿ ಹೋದಾಗ, ಏಕಾಏಕಿ ದಾಳಿ ಮಾಡಿದ ಬೀದಿ ನಾಯಿ ಅವರ ಕಾಲಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಇದರ ಪರಿಣಾಮವಾಗಿ ಕಾಲಿನಿಂದ ಅಧಿಕ ರಕ್ತಸ್ರಾವವಾಗಿದ್ದು, ನೋವಿನಿಂದ ನರಳುತ್ತಿದ್ದ ಅವರನ್ನು ಸ್ಥಳೀಯರು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ವಿದ್ಯಾಗಿರಿ ಹಾಗೂ ಅದರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಸಾರ್ವಜನಿಕರು ಹಾಗೂ ಕೆಲಸದ ನಿಮಿತ್ತ ಬರುವ ಸಿಬ್ಬಂದಿಯ ಮೇಲೆ ನಾಯಿಗಳು ಪದೇ ಪದೇ ದಾಳಿ ಮಾಡುತ್ತಿದ್ದು, ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




