ಉಪ್ಪಿನಂಗಡಿಯ ದಿನಸಿ ಅಂಗಡಿಯಲ್ಲಿ ಬೆಳ್ಳುಳ್ಳಿ ಕಳ್ಳತನಕ್ಕೆ ಯತ್ನಿಸಿದ ಕಳ್ಳ
ದಿನಸಿ ಅಂಗಡಿಯೊಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳನೋರ್ವ ಬೆಳ್ಳುಳ್ಳಿ ಗೋಣಿಯನ್ನು ಕದಿಯಲು ಯತ್ನಿಸಿದ್ದಾನೆ. ಸಿಸಿ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಆತ, ಗೋಣಿಯನ್ನು ಹೊರತಂದರೂ ನಿಗೂಢವಾಗಿ ಅದನ್ನು ಅಲ್ಲೇ ಬಿಟ್ಟು ಪರಾ...

ಉಪ್ಪಿನಂಗಡಿಯ ದಿನಸಿ ಅಂಗಡಿಯೊಂದಕ್ಕೆ ರಾತ್ರಿ 2.30ರ ಸುಮಾರಿಗೆ ನುಗ್ಗಿದ ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಗೋಣಿಯನ್ನು ಕದಿಯಲು ಪ್ರಯತ್ನಿಸಿದ್ದಾನೆ. ಸಿಸಿ ಕ್ಯಾಮರಾದಲ್ಲಿ ತನ್ನ ಗುರುತು ಸಿಗಬಾರದೆಂದು ಆರೋಪಿಯು ತನ್ನ ಲುಂಗಿಯನ್ನು ಮುಖಕ್ಕೆ ಸುತ್ತಿಕೊಂಡು ಬೆಳ್ಳುಳ್ಳಿಯನ್ನು ಹೊರಗೆ ಎಳೆದುಕೊಂಡು ಬಂದಿದ್ದಾನೆ. ಆದರೆ, ಕೊನೆಯ ಕ್ಷಣದಲ್ಲಿ ಆತ ಗೋಣಿ ಚೀಲವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕಳ್ಳನ ಈ ವಿಚಿತ್ರ ವರ್ತನೆಯನ್ನು ಗಮನಿಸಿದ ಅಂಗಡಿ ಮಾಲೀಕರು, ಯಾವುದೋ ದೈವಿಕ ಶಕ್ತಿಯ ಪ್ರಭಾವದಿಂದ ಆತ ಕಳ್ಳತನ ಮಾಡಲಾಗದೆ ಸ್ಥಳದಿಂದ ತೆರಳಿದ್ದಾನೆ ಎಂದು ನಂಬಿದ್ದಾರೆ.




