ನ್ಯೂಯಾರ್ಕ್ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಸ್ಪಷ್ಟಪಡಿಸಿದ ಭಾರತ
ನ್ಯೂಯಾರ್ಕ್: ಭಯೋತ್ಪಾದನೆ ನಿಗ್ರಹ ವರದಿಯಲ್ಲಿ ತೀವ್ರ ತಪ್ಪು ಮಾಹಿತಿ ಮತ್ತು ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಭಾರತವು ವಿಶ್ವಸಂಸ್ಥೆಯ (UN) ವಿಶೇಷ ವರದಿಗಾರ ಬೆನ್ ಸಾಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ...

ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬೆನ್ ಸಾಲ್ ಅವರು ಡಿ-ಕಂಪನಿಯನ್ನು ಭಾರತ ಮೂಲದ ಸಂಘಟನೆ ಎಂದು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಭಾರತೀಯ ರಾಜತಾಂತ್ರಿಕ ರಘು ಪುರಿ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನೆಲೆಸಿದ್ದು, ಆತ ಭಾರತಕ್ಕೆ ಬೇಕಾಗಿರುವ ಅಪರಾಧಿ ಎಂದು ಪುನರುಚ್ಚರಿಸಿದ್ದಾರೆ. ವಿಶ್ವಸಂಸ್ಥೆಯ ವರದಿಗಳಲ್ಲಿ ವಸ್ತುನಿಷ್ಠತೆ ಮತ್ತು ಹೊಣೆಗಾರಿಕೆ ಇರಬೇಕೆಂದು ಆಗ್ರಹಿಸಿದ ಭಾರತ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗಗಳೆಂದು ಪಾಕಿಸ್ತಾನಕ್ಕೆ ಸ್ಪಷ್ಟ ತಿರುಗೇಟು ನೀಡಿದೆ.




