ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ತಿರುವನಂತಪುರಂ: ರಾಜಭವನದಲ್ಲಿ ಸಸ್ಯಾಹಾರ ಕಡ್ಡಾಯಗೊಳಿಸಿದ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್

ತಿರುವನಂತಪುರಂ: ಕೇರಳದ 29ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ಬಿಜೆಪಿ ಮುಖಂಡ ಓಂ ಪ್ರಕಾಶ್ ಮಾಥುರ್, ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದಾರೆ. ರಾಜಭವ...

ಕೇರಳ: ರಾಜಭವನದ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಸಸ್ಯಹಾರ ಮಾತ್ರ; ಪ್ರಮಾಣ ವಚನದ ಮೊದಲ ದಿನವೇ ರಾಜ್ಯಪಾಲರ ಆದೇಶ- ಕಾಂಗ್ರೆಸ್ ಆಕ್ರೋಶ!
ಹಂಚಿಕೊಳ್ಳಿ:

ಕೇರಳದ ಹೊಸ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಓಂ ಪ್ರಕಾಶ್ ಮಾಥುರ್ ಅವರು, ರಾಜಭವನದ ಅಡುಗೆಮನೆಯಲ್ಲಿ ಕೇವಲ ಸಸ್ಯಾಹಾರ ಮಾತ್ರ ತಯಾರಿಸಬೇಕೆಂದು ಆದೇಶ ನೀಡಿದ್ದಾರೆ. ಈ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಹಾಗೂ ಸಿಪಿಐ(ಎಂ) ನಾಯಕ ಎಂ.ವಿ. ಗೋವಿಂದನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಹಾರ ಪದ್ಧತಿಯ ಮೇಲೆ ನಿರ್ಬಂಧ ಹೇರುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಅವರು ಆರೋಪಿಸಿದ್ದಾರೆ. ಆದರೆ, ರಾಜ್ಯಪಾಲರು ಸಸ್ಯಾಹಾರಿಯಾಗಿರುವುದರಿಂದ ಈ ಆದೇಶ ನೀಡಿದ್ದು, ನೌಕರರ ಆಹಾರ ಆಯ್ಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಹಂಚಿಕೊಳ್ಳಿ: