ನವದೆಹಲಿಯಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಸ್ರೋ ರಾಕೆಟ್ ಲಾಂಚ್‌ಗಳಿಗಿಂತ ರಾಹುಲ್ ಅವರ "ವಿಫಲ ಉತ್ಪನ್ನದ ಮರು-ಉಡಾವಣೆ" ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು....

ನವದೆಹಲಿಯಲ್ಲಿ ನಡೆದ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶ್ರೀಹರಿಕೋಟಾದಲ್ಲಿ ಉಡಾವಣೆಯಾಗುವ ರಾಕೆಟ್‌ಗಳಿಗಿಂತಲೂ ಹೆಚ್ಚು ಬಾರಿ ಕಾಂಗ್ರೆಸ್ ತನ್ನ ವಿಫಲ ನಾಯಕನನ್ನು ಮರು-ಉಡಾವಣೆ ಮಾಡಲು ಯತ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು. ದೇಶದ ಸಾಧನೆಗಳನ್ನು ವಿದೇಶಗಳಲ್ಲಿ ಕೀಳಾಗಿ ಬಿಂಬಿಸುವ ಮೂಲಕ ಒಂದು ಕುಟುಂಬದ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಮೇಲೆ ಅರ್ಬನ್ ನಕ್ಸಲರ ಪ್ರಭಾವ ಹೆಚ್ಚಾಗಿದ್ದು, ಆ ಪಕ್ಷವು ಇತರರ ಮೇಲೆ ಅವಲಂಬಿತವಾದ ಪರಾವಲಂಬಿ ಸಂಸ್ಥೆಯಾಗಿ ಬದಲಾಗಿದೆ ಎಂದು ಪ್ರಧಾನಿ ಟೀಕಿಸಿದರು.




