ಮುಂಬೈನ ಜುಹು ಬಂಗಲೆಯ ಅಕ್ರಮ ನಿರ್ಮಾಣ ತೆರವುಗೊಳಿಸಿದ ಬಿಎಂಸಿ ಅಧಿಕಾರಿಗಳು
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಬಂಗಲೆಯಲ್ಲಿ ಅನುಮತಿಯಿಲ್ಲದೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಬೃಹನ್...

ಮುಂಬೈನ ಜುಹು ಪ್ರದೇಶದಲ್ಲಿರುವ ನಟ ಅಜಯ್ ದೇವಗನ್ ಅವರ 7,802 ಚದರ ಅಡಿ ವಿಸ್ತೀರ್ಣದ ಬಂಗಲೆಯಲ್ಲಿ ಬಿಎಂಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಟ್ಟಡದಲ್ಲಿ ಅನುಮತಿ ಪಡೆಯದೆ ಗೋಡೆಗಳು ಮತ್ತು ಕಿಟಕಿಗಳ ಬದಲಾವಣೆ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 10ರಂದು ನೋಟಿಸ್ ನೀಡಿದ್ದರೂ ಕಾಮಗಾರಿ ಮುಂದುವರಿದ ಕಾರಣ, ಪಾಲಿಕೆ ಕಾಯ್ದೆಯ ಸೆಕ್ಷನ್ 354ಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ವಿಮಲ್ ಜಾಹೀರಾತಿನ ವಿಚಾರದಲ್ಲಿ ಎಫ್ಡಿಎ ನೀಡಿದ ಶೋಕಾಸ್ ನೋಟಿಸ್ ಕೂಡ ನಟನಿಗೆ ಸಂಕಷ್ಟ ತಂದೊಡ್ಡಿದೆ.




