ಜಾಮ್‌ನಗರ: 9 ಲಕ್ಷ ಹಸುಗಳ ರಕ್ಷಣೆ ಮಾಡುತ್ತಿದ್ದೇನೆ ಎಂದ ಅನಂತ್ ಅಂಬಾನಿ
ರಿಲಯನ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಮ್ಮ ಮನೆಯಲ್ಲಿ ಹಸುಗಳ ಆರೈಕೆ ಮಾಡುವ ತಮ್ಮ ವೈಯಕ್ತಿಕ ದಿನಚರಿಯ ಜೊತೆಗೆ, ಬೃಹತ್ ಪ್ರಮಾಣದಲ್ಲಿ ಹಸುಗಳ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆಯೂ ವಿವ...

ರಿಲಯನ್ಸ್ ಸಂಸ್ಥೆಯ ಅನಂತ್ ಅಂಬಾನಿ ತಾವು ಒಟ್ಟು 9 ಲಕ್ಷ ಹಸುಗಳ ಪಾಲನೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ತಿಳಿಸಿದ್ದಾರೆ. ಇವರ ಪೈಕಿ ಹಾಲು ನೀಡದ ಹಸುಗಳ ಸಂಖ್ಯೆಯೇ 7 ಲಕ್ಷದಷ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸದಂತೆ ತಡೆಯಲು ಎಂಟು ರಾಜ್ಯಗಳಲ್ಲಿ 100 ಆಂಬುಲೆನ್ಸ್‌ಗಳನ್ನು ಬಳಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿಯಿಂದ ಈ ಕಾರ್ಯ ಮಾಡುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಂತರಾ ಕೇಂದ್ರ ಸ್ಥಾಪಿಸಿದ್ದಾರೆ. ಗೋಶಾಲೆಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ಅವರು ವಿವರಿಸಿದ್ದಾರೆ.




