ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಶಿಕ್ಷಣ

ನವದೆಹಲಿಯಲ್ಲಿ ಅಗ್ನಿವೀರರ ನೇಮಕಾತಿ ನಿಯಮ ಬದಲಾವಣೆ: ಸೇನೆಯಲ್ಲಿ ಮುಂದುವರಿಯಲು ಅವಕಾಶ

ಅಗ್ನಿವೀರರ ಸೇವಾ ಅವಧಿ ವಿಸ್ತರಣೆ ಹಾಗೂ ಕಾಯಂ ನೇಮಕಾತಿಗೆ ಕೇಂದ್ರ ನಿರ್ಧರಿಸಿದ್ದು, ಚುನಾವಣೆ ಎದುರಿಸಲಿರುವ ರಾಜ್ಯಗಳ ಮತದಾರರ ಮನವೊಲಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಗ್ನಿವೀರರ ನೇಮಕದಲ್ಲಿ ಮಹತ್ವದ ಬದಲಾವಣೆ: ಚುನಾವಣೆ ಹೊಸ್ತಿಲಲ್ಲಿ BJP ಪ್ಲಾನ್?
ಹಂಚಿಕೊಳ್ಳಿ:

ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಅಗ್ನಿವೀರರು ನಾಲ್ಕು ವರ್ಷಗಳ ಸೇವೆಯ ನಂತರವೂ ಭಾರತೀಯ ಸೇನೆಯಲ್ಲಿ ಕಾಯಂ ಆಗಿ ಮುಂದುವರಿಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸುಮಾರು 18,000 ಅಗ್ನಿವೀರರು ಶೀಘ್ರವೇ ತಮ್ಮ ಸೇವೆಯ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು, ಈ ಬದಲಾವಣೆಯು ಆ ಯುವಕರಿಗೆ ದೊಡ್ಡ ಮಟ್ಟದ ಭರವಸೆ ನೀಡಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ವ್ಯಂಗ್ಯವಾಡಿದ್ದು, ಬಿಜೆಪಿ ತನ್ನ ನಿರ್ಧಾರಗಳನ್ನು ಪದೇ ಪದೇ ಬದಲಿಸುತ್ತಿರುವುದನ್ನು ಟೀಕಿಸಿದ್ದಾರೆ.

ಹಂಚಿಕೊಳ್ಳಿ: