ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ವಿಟ್ಲ: ಬೊಲೇರೊ ವಾಹನ ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಗರಡಿ ಎಂಬಲ್ಲಿ ಬೊಲೇರೊ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾಮೋದರ ನಾಯ್ಕ್ ಗಾಯಗೊಂಡಿರುವ ಬಗ್ಗೆ ದೂರು ದಾಖಲಾಗಿದೆ. ದೂರಿನ ಪ್ರಕಾರ, ದಿನಾಂಕ 2...

· ದಕ್ಷಿಣ ಕನ್ನಡ
ರಸ್ತೆ ಅಪಘಾತ
ಹಂಚಿಕೊಳ್ಳಿ:

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಗರಡಿ ಎಂಬಲ್ಲಿ ಬೊಲೇರೊ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾಮೋದರ ನಾಯ್ಕ್ ಗಾಯಗೊಂಡಿರುವ ಬಗ್ಗೆ ದೂರು ದಾಖಲಾಗಿದೆ.

ದೂರಿನ ಪ್ರಕಾರ, ದಿನಾಂಕ 25-10-2026 ರಂದು ಬೆಳಗ್ಗೆ 9.35 ಗಂಟೆಗೆ ರಿಫಾಝ್ ಎಂಬವರು ಚಲಾಯಿಸುತ್ತಿದ್ದ ಮಹೀಂದ್ರ ಬೊಲೇರೊ ವಾಹನ (KA-01-ML-1770), ಪುಣಚಪೇಟೆಯಿಂದ ಪುತ್ತೂರು ಕಡೆಗೆ ಸಾಗುತ್ತಿತ್ತು. ಇದೇ ವೇಳೆ ದಾಮೋದರ ನಾಯ್ಕ್ ಅವರು ತಮ್ಮ ಸ್ಕೂಟರ್‌ನಲ್ಲಿ (KA-19-HY-7408) ಪೆರಿಯಲ್ತಡ್ಕ ಕಡೆಯಿಂದ ಗರಡಿ ಕಡೆಗೆ ಬರುತ್ತಿದ್ದರು.

ದಾಮೋದರ ನಾಯ್ಕ್ ಅವರು ತಮ್ಮ ಮನೆಯ ಕಡೆಗೆ ಹೋಗಲು ಬಲಬದಿಗೆ ಇಂಡಿಕೇಟರ್ ಹಾಕಿ ತಿರುಗುತ್ತಿದ್ದಾಗ, ಹಿಂದಿನಿಂದ ಬಂದ ಬೊಲೇರೊ ವಾಹನವು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರ ಮಣ್ಣಿನ ರಸ್ತೆಗೆ ಬಿದ್ದು, ಬೆನ್ನು, ಸೊಂಟ ಮತ್ತು ಬಲಕಾಲಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ಗಾಯಾಳು ಪೆರಿಯಲ್ತಡ್ಕ ಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಮರುದಿನ ಸೊಂಟದ ನೋವು ಹೆಚ್ಚಾದ ಕಾರಣ, ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 222/2026 ರಂತೆ ಬಿಎನ್‌ಎಸ್ 2023 ಕಲಂ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಹಂಚಿಕೊಳ್ಳಿ: