ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕಡಬ: ಹಣದ ವಿಚಾರಕ್ಕೆ ವ್ಯಾಪಾರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪ

ಕಡಬದಲ್ಲಿ ವ್ಯಾಪಾರ ಮಾಡಿಕೊಂಡಿರುವ ಕೆ.ಎಂ. ಮ್ಯಾಥ್ಯೂ ಎಂಬುವವರಿಗೆ ಹಣದ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ದಿನಾಂಕ 12.11.2026 ರಂ...

· ದಕ್ಷಿಣ ಕನ್ನಡ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಕಡಬದಲ್ಲಿ ವ್ಯಾಪಾರ ಮಾಡಿಕೊಂಡಿರುವ ಕೆ.ಎಂ. ಮ್ಯಾಥ್ಯೂ ಎಂಬುವವರಿಗೆ ಹಣದ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ದಿನಾಂಕ 12.11.2026 ರಂದು ಬೆಳಗ್ಗೆ 11.00 ಗಂಟೆಗೆ ಕೋಡಿಂಬಾಳದ ಅನೀಸ್ ಎಂಬಾತ ಮ್ಯಾಥ್ಯೂ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಕಡಬ ಪೇಟೆಗೆ ಬರುವಂತೆ ಸೂಚಿಸಿದ್ದಾನೆ.

ಮ್ಯಾಥ್ಯೂ ಅವರು ತಮ್ಮ ಮಗ ರಕ್ಷಿತ್ ಜೊತೆಗೆ ಕಾರಿನಲ್ಲಿ ಕಡಬದ ಗಣೇಶ್ ಮೆಡಿಕಲ್ ಬಳಿ ಬಂದಾಗ, ಅನೀಸ್ ಮತ್ತೆ ಕರೆ ಮಾಡಿ ಸ್ಥಳದ ಬಗ್ಗೆ ವಿಚಾರಿಸಿದ್ದಾನೆ. ಮ್ಯಾಥ್ಯೂ ಸ್ಥಳದ ಮಾಹಿತಿ ನೀಡಿದ ಕೆಲವೇ ಸಮಯದಲ್ಲಿ, ಅನೀಸ್ ವಿಕ್ಟರ್ ಮಾರ್ಟಿಸ್ ಜೊತೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ (ನಂಬ್ರ KA21N2192) ಅಲ್ಲಿಗೆ ಬಂದಿದ್ದಾನೆ.

ಆರೋಪಿ ಅನೀಸ್ ಕಾರಿನಿಂದ ಇಳಿದು ಹಲ್ಲೆಗೆ ಮುಂದಾದಾಗ, ಸ್ಥಳದಲ್ಲಿದ್ದ ಗಣೇಶ್ ಎಂಬುವವರು ಆತನನ್ನು ತಡೆದಿದ್ದಾರೆ. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಯು ಕಾರಿನ ಸಿ.ಸಿ. ಕ್ಯಾಮರಾ ಮತ್ತು ಸಮೀಪದ ಅಂಗಡಿಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026, ಕಲಂ 126(2), 308(5) ಹಾಗೂ 3(5) ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಅಪರಾಧ ಕ್ರಮಾಂಕ 136/2026

ಹಂಚಿಕೊಳ್ಳಿ: