ಸುಳ್ಯ: ಶಾಲಾ ಬಸ್ಸುಗಳ ನಡುವೆ ಅಪಘಾತ, ವಾಹನ ಜಖಂ
ಸುಳ್ಯದ ಮಲ್ಲಪಾರೆ ಎಂಬಲ್ಲಿ ಶಾಲಾ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು, ಈ ಸಂಬಂಧ ದುಶ್ಯಂತ್ ಎಚ್ ಬಿ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ 04.11.2026 ರಂದು ಬೆಳಿಗ್ಗೆ 07...

ಸುಳ್ಯದ ಮಲ್ಲಪಾರೆ ಎಂಬಲ್ಲಿ ಶಾಲಾ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು, ಈ ಸಂಬಂಧ ದುಶ್ಯಂತ್ ಎಚ್ ಬಿ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ದಿನಾಂಕ 04.11.2026 ರಂದು ಬೆಳಿಗ್ಗೆ 07.40 ಗಂಟೆಗೆ ಕರಿಕೆ ಚತ್ತುಕಾಯದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಕೆಎ 21 ಬಿ 5050 ನಂಬರಿನ ಬಸ್ಸಿನಲ್ಲಿ ಹೊರಟಿದ್ದರು. ಕಲ್ಲಪಳ್ಲಿ ಬಡ್ಡಡ್ಕ ಮಾರ್ಗವಾಗಿ ನಾರ್ಕೋಡು ರಸ್ತೆಯಲ್ಲಿ ಬಸ್ಸು ಸಂಚರಿಸುತ್ತಿತ್ತು.
ಬೆಳಿಗ್ಗೆ 08.45 ಗಂಟೆಯ ಸುಮಾರಿಗೆ ಮಲ್ಲಪಾರೆ ಎಂಬಲ್ಲಿ ತಲುಪಿದಾಗ, ಎದುರುಗಡೆಯಿಂದ ಬಂದ ರೋಟರಿ ಶಾಲಾ ಬಸ್ಸು ಕೆಎ 21 ಬಿ 4531 ಅತೀ ವೇಗವಾಗಿ ಬಂದು ನಿಲ್ಲಿಸಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಅಪಘಾತದಿಂದ ಕೆಎ 21 ಬಿ 5050 ನಂಬರಿನ ಬಸ್ಸಿನ ಎದುರಿನ ಗ್ಲಾಸ್, ಬಲಭಾಗದ ಡೋರ್ ಮತ್ತು ಬಂಪರ್ ಸೇರಿದಂತೆ ವಿವಿಧ ಭಾಗಗಳು ಜಖಂಗೊಂಡಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 154/2026, ಕಲಂ 281 ಬಿಎನ್ಎಸ್-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.


