ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಅಪರಾಧ

ಸುಬ್ರಹ್ಮಣ್ಯ: ಇತರೆ ಪ್ರಕರಣ

ಪಿರ್ಯಾಧಿದಾರರಾದ ಆಂಜನೇಯ ರೆಡ್ಡಿ ಪ್ರಾಯ:46 ವರ್ಷ ಪೊಲೀಸ್ ಉಪ ನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆ ರವರ ದೂರಿನಂತೆ ದಿನಾಂಕ 15-10-2026 ರಂದು ರಾತ್ರಿ ಸರ್ಕಲ್ ನೋಡೆಲ್ ಕರ್ತವ್ಯದಲ್ಲಿರುವಾಗ ರಾತ್ರಿ ರೌಂಡ್ಸ್...

· ದಕ್ಷಿಣ ಕನ್ನಡ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ಆಂಜನೇಯ ರೆಡ್ಡಿ ಪ್ರಾಯ:46 ವರ್ಷ ಪೊಲೀಸ್ ಉಪ ನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆ ರವರ ದೂರಿನಂತೆ ದಿನಾಂಕ 15-10-2026 ರಂದು ರಾತ್ರಿ ಸರ್ಕಲ್ ನೋಡೆಲ್ ಕರ್ತವ್ಯದಲ್ಲಿರುವಾಗ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ಸೀತಾರಾಮ ಗೌಡ ಎಎಸ್ಐ ರವರು ಸಮಯ 4-50 ಗಂಟೆಗೆ ಪೋನು ಕರೆ ಮಾಡಿ ಸುಬ್ರಹ್ಮಣ್ಯ ಕುಲ್ಕುಂದ ಚೆಕ್ ಪಾಯಿಂಟ್ ನಲ್ಲಿ ವಾಹನ ತಪಾಸನೆ ಮಾಡುತ್ತಿರುವಾಗ ಸುಬ್ರಹ್ಮಣ್ಯ ಕಡೆಯಿಂದ ಬಂದ ಪಿಕಪ್ ವಾಹನವನ್ನು ಪರಿಶೀಲಿಸಲಾಗಿ ಪಿಕಪ್ ವಾಹನದಲ್ಲಿ ಎರಡು ಜಾನುವಾರುಗಳಿದ್ದು ಸದ್ರಿ ಜಾನುವಾರುಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೇ ಇದ್ದು ಮಾಹಿತಿಯನ್ನು ತಿಳಿಸಿದಂತೆ ನಾನು ಕೂಡಲೇ ಕುಲ್ಕುಂದ ಚೆಕ್ ಪಾಯಿಂಟ್ ಬಳಿ ಬಂದು ನೋಡಲಾಗಿ KA13C3446 ನಂಬ್ರದ ಬೊಲೇರೋ ಪಿಕಪ್ ವಾಹನವಾಗಿದ್ದು ವಾಹನದಲ್ಲಿ ಕಪ್ಪು ಬಣ್ಣದ ಹೆಣ್ಣು ಮತ್ತು ಕಪ್ಪು ಬೂದು ಮಿಶ್ರಿತ ಬಣ್ಣದ ಹೋರಿಯಾಗಿದ್ದು ಸದ್ರಿ ಜಾನುವಾರುಗಳನ್ನುಸಾಗಾಟ ಮಾಡಲು ಪರವಾನಿಗೆ ಇದೆಯೇ ? ಎಂದು ಪಿಕಪ್ ಚಾಲಕನಲ್ಲಿ ವಿಚಾರಿಸಿದಾಗ ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿದ್ದು ನಂತರ ಚಾಲಕನ ಹೆಸರು ವಿಳಾಸ ಕೇಳಲಾಗಿ ಆತ ತನ್ನ ಹೆಸರು ಆನಂದ ಎಲ್ಎಸ್ ಪ್ರಾಯ 31 ವರ್ಷ ಅರಕಲಗೂಡು ತಾಲೂಕು ಹಾಸನ ಜಿಲ್ಲೆ ಎಂಬುದಾಗಿ ತಿಳಿಸಿದ್ದು ಆತನಲ್ಲಿ ಜಾನುವಾರುಗಳನ್ನು ಎಲ್ಲಿಗೆ ಸಾಗಾಟ ಮಾಡುತ್ತಿದ್ದೀರಿ ಎಂದು ಕೇಳಿದಾಗ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸುಳ್ಯ ತಾಲೂಕು ಮಡಪ್ಪಾಡಿಯ ಆಡಿಕಲ್ಲು ಗಂಗಾಧರ ಮತ್ತು ಸುಳ್ಯ ತಾಲೂಕು ದೊಡ್ಡತೋಟದ ಧನಂಜಯ ರವರ ಮನೆಯಿಂದ ಖರೀದಿಸಿ ಸಾಗಾಟ ನಾಡುತ್ತಿರುವುದಾಗಿ ತಿಳಿಸಿದ್ದು ನಂತರ ವಾಹನದಲ್ಲಿದ್ದ ಇತರ ಇಬ್ಬರ ಹೆಸರು ವಿಳಾಸ ಕೇಳಲಾಗಿ ಸಚಿನ್ ಅರಕಲಗೂಡು ತಾಲೂಕು ಹಾಸನ ಜಿಲ್ಲೆ ಹಾಗೂ ಕೀರ್ತೇಶ್ ಅರಕಲಗೂಡು ತಾಲೂಕು ಎಂಬುದಾಗಿ ತಿಳಿಸಿರುತ್ತಾರೆ. ಆರೋಪಿತರು ಸಾಗಾಟ ಮಾಡುತ್ತಿದ್ದ ಜಾನುವಾರುಗಳಾದ ಹಸುವಿನ ಅಂದಾಜು ಮೌಲ್ಯ ರೂ 15,000/- ಹಾಗೂ ಹೋರಿಯ ಅಂದಾಜು ಮೌಲ್ಯ ರೂ 10,000/- ಆಗಬಹುದು ಪಿಕಪ್ ವಾಹನದ ಅಂದಾಜು ಮೌಲ್ಯ ರೂ 1,50,000/- ಆಗಬಹುದಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ:36/2026 ಕಲಂ:, ಕಲಂ:4.5,7.12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ-2020 ಮತ್ತು ಕಲಂ:11 (ಡಿ) ಪ್ರಾಣಿ ಹಿಂಸಾತ್ಮಕ ತಡೆ ಕಾಯ್ದೆ-1960 ಕಲಂ:66, 192(A),66 IMV Act-1988 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪೊಲೀಸ್ ಉಪ ನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆ

ಹಂಚಿಕೊಳ್ಳಿ: