ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಅಪರಾಧ

ಬಂಟ್ವಾಳ: ಅಪಘಾತ ಪ್ರಕರಣ

ಪಿರ್ಯಾಧಿದಾರರಾದ ಮುಹಮ್ಮದ್ ಇರ್ಫಾನ್ (25) : ಸಫ ನಗರ, ಮುಕಜ್ಜಂ ಉಳ್ಳಾಲ ಎಂಬವರ ದೂರಿನಂತೆ ದಿನಾಂಕ: 14.10.2026 ರಂದು ಪಿರ್ಯಾದಿದಾರರ ಅಣ್ಣ ಮುಹಮ್ಮದ್ ಇರ್ಷಾದ್ ರವರು ಸವಾರನಾಗಿ ಪಿರ್ಯಾದಿದಾರರ ತಾಯಿ ಬಿಫಾತಿಮ ರ...

· ದಕ್ಷಿಣ ಕನ್ನಡ
ರಸ್ತೆ ಅಪಘಾತ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ಮುಹಮ್ಮದ್ ಇರ್ಫಾನ್ (25) : ಸಫ ನಗರ, ಮುಕಜ್ಜಂ ಉಳ್ಳಾಲ ಎಂಬವರ ದೂರಿನಂತೆ ದಿನಾಂಕ: 14.10.2026 ರಂದು ಪಿರ್ಯಾದಿದಾರರ ಅಣ್ಣ ಮುಹಮ್ಮದ್ ಇರ್ಷಾದ್ ರವರು ಸವಾರನಾಗಿ ಪಿರ್ಯಾದಿದಾರರ ತಾಯಿ ಬಿಫಾತಿಮ ರವರು ಸಹ ಸವಾರಿಣಿಯಾಗಿ KA-19-HW-2852 ನಂಬ್ರದ ಮೋಟಾರ್ ಸೈಕಲಿನಲ್ಲಿ ಪೊನ್ನೊಡಿ ಎಂಬಲ್ಲಿನ ಸಂಬಂಧಿಕರ ಮನೆಗೆ ಹೋಗಿ ವಾಪಾಸ್ಸು ಪೊನೊಡಿ ಕಡೆಯಿಂದ ಮಂಗಳೂರು ಕಡೆಗೆ ಒಳರಸ್ತೆಯಲ್ಲಿ ಬರುತ್ತಿರುವಾಗ ಸಮಯ ರಾತ್ರಿ 08:30 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನೊಡಿ ಎಂಬಲ್ಲಿ ಮೋಟಾರ್ ಸೈಕಲನ್ನು ಸವಾರ ಮುಹಮ್ಮದ್ ಇರ್ಷಾದ್ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ತಿರುವು ರಸ್ತೆಯಲ್ಲಿ ಮೋಟಾರ್ ಸೈಕಲ್ ಸಮೇತ ಬಿದ್ದು ಗಾಯಗೊಂಡವರನ್ನು ಪಿರ್ಯಾದಿದಾರರ ಸಂಬಂಧಿ ಸೇಮಿರ್ ಎಂಬುವರು ರಿಕ್ಷಾದಲ್ಲಿ ಪರ್ಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿಯ ವೈದ್ಯರು ಸವಾರ ಮುಹಮ್ಮದ್ ಇರ್ಷಾದ್ ನನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿ ಸಹ ಸವಾರಿಣಿ ಬಿಫಾತಿಮಾ ರವರನ್ನು ಒಳರೋಗಿಯಾಗಿ ದಾಖಲಿಸಿ ಐ ಸಿ ಯು ನಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ,ಕ್ರ 128/2026 ಕಲಂ: 281,125(a) ,BNS ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಂಚಿಕೊಳ್ಳಿ: