ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಅಪರಾಧ

ಬಂಟ್ವಾಳ ಗ್ರಾಮಾಂತರ: ಕಳವು ಪ್ರಕರಣ

ಪಿರ್ಯಾಧಿದಾರರಾದ ಮಹಮ್ಮದ್ ರಿಯಾಜ್, (34) ಪುದ್ದೋಟ್ಟು ಮನೆ, ಸಾಲೇತ್ತೂರು ಅಂಚೆ ಕೊಲ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಮನೆಯ ಹಿಂಬಂದಿಯಲ್ಲಿ ವಾಹ ಎಂಬ ಸಾಪ್ಟ್ ಡ್ರೀಂಗ್ಸ್ ಕಂ...

· ದಕ್ಷಿಣ ಕನ್ನಡ
ಪೊಲೀಸ್ ಸಿಬ್ಬಂದಿ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ಮಹಮ್ಮದ್ ರಿಯಾಜ್, (34) ಪುದ್ದೋಟ್ಟು ಮನೆ, ಸಾಲೇತ್ತೂರು ಅಂಚೆ ಕೊಲ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಮನೆಯ ಹಿಂಬಂದಿಯಲ್ಲಿ ವಾಹ ಎಂಬ ಸಾಪ್ಟ್ ಡ್ರೀಂಗ್ಸ್ ಕಂಪನಿ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದು. ಪಿರ್ಯಾದಿದಾರರು ಪ್ರತಿ ದಿನ ಬೆಳಗ್ಗೆ 08.00 ಗಂಟೆಗೆ ತಮ್ಮ ಮನೆಯ ಹಿಂಬದಿಯಲ್ಲಿ ವಾಹ ಎಂಬ ಸಾಪ್ಟ್ ಡ್ರೀಂಗ್ಸ್ ತಯಾರಿಸಿಕೊಂಡು ಮದ್ಯಾಹ್ನ 03.00 ಗಂಟೆಯ ನಂತರ ಸದ್ರಿ ಸಾಪ್ಟ್ ಡ್ರೀಂಗ್ಸ್ ಗಳನ್ನು ಲೈನ್ ಸೇಲ್ ಮಾಡಿಕೊಂಡಿರುತ್ತಾರೆ. ಹೀಗೆಯೇ ದಿನಾಂಕ:14.10.2026 ರಂದು ಬೆಳಗ್ಗೆ 11.30 ಗಂಟೆಗೆ ಪಿರ್ಯಾದಿದಾರರು ಕೆಲಸ ಮುಗಿಸಿಕೊಂಡು ತಮ್ಮ ಮನೆಯ ಹಿಂಭಾಗದ ಡ್ರೀಲ್ ಅಳವಡಿಸಿದ ಬಾಗಿಲಿನ ಚಿಲಕವನ್ನು ಒಳ ಬಾಗದಿಂದ ಹಾಕಿ, ಮುಂಭಾಗದ ಬಾಗಿಲಿಗೆ ಬೀಗ ಹಾಕಿಕೊಂಡು ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಮತ್ತು ಮಕ್ಕಳೊಂದಿಗೆ ಹೆಂಡತಿಯ ಮನೆಯಾದ ಮೊಂಟ್ಟುಗೊಳಿ ಎಂಬಲ್ಲಿಗೆ ಹೋಗಿರುತ್ತಾರೆ. ದಿನಾಂಕ:15.10.2026 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರು ಮೊಂಟ್ಟುಗೊಳಿ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಪಿರ್ಯಾದಿದಾರರು ಮೊಂತಿಮಾರು ನೊಳ ಎಂಬಲ್ಲಿಯ ಮನೆಗೆ ಬಂದು ಬೀಗ ತೆಗೆದು ಒಳಗೆ ಪ್ರವೇಶಿಸಿ ನೋಡಿದಲ್ಲಿ ಮನೆಯ ಒಳ ಭಾಗದಲ್ಲಿ ಬಟ್ಟೆ –ಬರೆಗಳು ನೆಲದ ಮೇಲೆ ಚಿಲ್ಲಾಪಿಲ್ಲಿಯಾಗಿ ಬಿಸಾಡಿರುವುದು ಕಂಡು ಬಂದಿರುತ್ತದೆ. ನಂತರ ಮನೆಯ ಒಳಭಾಗದಲ್ಲಿಯ ಗಾಡ್ರೇಜ್ ನ್ನು ನೊಡಲಾಗಿ ಗಾಡ್ರೇಜ್ ನಿಂದ ಬಟ್ಟೆ ಬರೆಗಳು ಹೊರಗೆ ಬಿದ್ದುಕೊಂಡಿರುವುದು ಕಂಡು ಬಂದಿರುತ್ತದೆ. ಮನೆಯಲ್ಲಿರುವ ಗಾಡ್ರೇಜ್ ನ ಒಳಭಾಗದ ಕಪಾಟಿನಲ್ಲಿ ಇಟ್ಟಿರುವ ಹ್ಯಾಂಡ್ ಬ್ಯಾಗ್ ನ್ನು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪಿರ್ಯಾದಿದಾರರು ಹ್ಯಾಂಡ್ ಬ್ಯಾಗ್ ನಲ್ಲಿ ಸುಮಾರು 2 ಗ್ರಾಂ ತೂಕದ ಒಟ್ಟು 72,000 ರೂ ಮೌಲ್ಯದ 3 ಚಿನ್ನದ ಕೈ ಉಂಗುರಗಳು, ಸುಮಾರು 8 ಗ್ರಾಂ ತೂಕದ 96,000 ರೂ ಮೌಲ್ಯದ ಚಿನ್ನದ ಬ್ರಾಸ್ ಲೈಟ್-1, ಸುಮಾರು 8 ಗ್ರಾಂ ತೂಕದ 96,000 ರೂ ಮೌಲ್ಯದ ಚಿನ್ನದ ಕಿವಿಯೋಲೆ-1, ಸುಮಾರು 2 ಗ್ರಾಂ ತೂಕದ 24,000 ರೂ ಮೌಲ್ಯದ ಚಿನ್ನದ ಸಣ್ಣ ಕಿವಿಯೊಲೆ -1, ಸುಮಾರು 2 ಗ್ರಾಂ ತೂಕದ 24,000 ರೂ ಮೌಲ್ಯದ ಕಿವಿಯೋಲೆಗೆ ಅಳವಡಿಸುವ ಚಿನ್ನದ ಟಿಕ್ಕಿ-1 ಹಾಗೂ ಸುಮಾರು 4 ಗ್ರಾಂ ತೂಕದ 48,000 ರೂ ಮೌಲ್ಯದ ಚಿನ್ನದ ನೆಕ್ ಲೆಸ್ 1 ಹಾಗು 2,000 ರೂ ನಗದು ಹಣವನ್ನು ಇರಿಸಿದ್ದು, ಸದ್ರಿ ಹ್ಯಾಂಡ್ ಬ್ಯಾಗನ್ನು ಯಾರೋ ಕಳ್ಳರು ಮನೆಯ ಹಿಂಭಾಗದ ಡ್ರೀಲ್ ಅಳವಡಿಸಿದ ಬಾಗಿಲಿನ ಚಿಲಕವನ್ನು ಕೈ ಹಾಕಿ ಒಳ ಭಾಗದಿಂದ ತೆರೆದು, ಒಳಗೆ ಪ್ರವೇಶಿಸಿ ಗಾಡ್ರೇಜ್ ನಲ್ಲಿ ಚಿನ್ನ ಮತ್ತು ಹಣವನ್ನು ಇರಿಸಿದ ಹ್ಯಾಂಡ್ ಬ್ಯಾಗ್ ನ್ನು ಕಳವು ಮಾಡಿರುತ್ತಾರೆ. ದಿನಾಂಕ: 14.10.2026 ರಂದು ಬೆಳಗ್ಗೆ ಸುಮಾರು 11.30 ಗಂಟೆಯಿಂದ ದಿನಾಂಕ:15.10.2026 ರಂದು ಬೆಳಿಗ್ಗೆ 10.30 ಗಂಟೆಯ ಮಧ್ಯೆ ಯಾರೋ ಕಳ್ಳರು ನಮ್ಮ ಮನೆಗೆ ಹಿಂಬಾಗಿಲನ್ನು ತೆರೆದು ಒಳಪ್ರವೇಶಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಇರಿಸಿದ್ದ ಗಾರ್ಡೆಜ್ ನ ಒಳ ಕಪಾಟುಗಳನ್ನು ಗಾಡ್ರೇಜ್ ನ ಮೇಲೆ ಇಟ್ಟಿದ್ದ ಗಾರ್ಡೆಜ್ ನ ಕೀ ಯ ಸಹಾಯದಿಂದ ತೆರದು ಬಟ್ಟೆ- ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ಸುಮಾರು 30 ಗ್ರಾಂ ನ 3,60,000 ರೂ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 2,000 ರೂ ನಗದು ಹಣವನ್ನು ಇರಿಸಿದ್ದ ಹ್ಯಾಂಡ್ ಬ್ಯಾಗ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ 137/2026 ಕಲಂ: 305, 331(3), 331(4) BNS ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಂಚಿಕೊಳ್ಳಿ: