ಪೂಂಚ್: ನುಸುಳಲು ಯತ್ನಿಸಿದ ಲಷ್ಕರ್-ಎ-ತಯಬಾದ ನಾಲ್ವರು ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಸಾವು
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನುಸುಳಲು ಯತ್ನಿಸುತ್ತಿದ್ದ 4 ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಲಷ್ಕರ್-ಎ-ತಯಬಾದ ಹಿರಿಯ ಕಮಾಂಡರ್ ಕೂಡ ಸೇರಿದ್ದಾನೆ....

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಲಷ್ಕರ್-ಎ-ತಯಬಾದ ಹಿರಿಯ ಕಮಾಂಡರ್ ಮುಹಮ್ಮದ್ ಫೈಜಾನ್ ಸೇರಿದಂತೆ ನಾಲ್ವರು ಭಯೋತ್ಪಾದಕರು ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಮುಹಮ್ಮದ್ ಇಶ್ತಿಯಾಕ್, ಮುಹಮ್ಮದ್ ವಕಾಸ್ ಮತ್ತು ಮುಹಮ್ಮದ್ ಅಸಿಮ್ ಮೃತಪಟ್ಟ ಇತರ ಉಗ್ರರಾಗಿದ್ದು, ಇವರೆಲ್ಲರೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾಗಿದ್ದಾರೆ. ಘಟನೆಯ ನಂತರ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಮೆಂಧರ್ ವಲಯದ ಬಸೋನಿ ಪ್ರದೇಶದಲ್ಲಿ ಸೇನೆ ಎರಡು ಹಳೆಯ ನೆಲಬಾಂಬುಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದೆ.



