ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಮಲ್ಪೆ: ಮೀನುಗಾರಿಕಾ ಬೋಟ್‌ನಿಂದ ಕಾಲು ಜಾರಿ ಬಿದ್ದು ಕಲಾಸಿ ಸಾವು

ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನಲ್ಲಿದ್ದ ಕಲಾಸಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಮಂಜುನಾಥ್ ಬೆರ್ಮ ಮೊಗೇರ ಅವರು ದೂರು ನೀಡಿದ್ದಾರೆ. ದೂರಿನ ಪ್ರಕಾರ, ಮಂಜುನಾಥ್...

· ಉಡುಪಿ
ಪೊಲೀಸ್ ತನಿಖೆ
ಹಂಚಿಕೊಳ್ಳಿ:

ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನಲ್ಲಿದ್ದ ಕಲಾಸಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಮಂಜುನಾಥ್ ಬೆರ್ಮ ಮೊಗೇರ ಅವರು ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಮಂಜುನಾಥ್ ಅವರು ದುರ್ಗಾ ರಕ್ಷಾ ಬೋಟ್‌ನಲ್ಲಿ ತಾಂಡೇಲನಾಗಿ ಕೆಲಸ ಮಾಡುತ್ತಿದ್ದು, ಸರೋಜ್ ದಂಡಸಾನ ಎಂಬವರು ಅದೇ ಬೋಟ್‌ನಲ್ಲಿ ಕಲಾಸಿಯಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 27ರಂದು ಮೀನುಗಾರಿಕೆಗೆ ತೆರಳಲು ಬೋಟ್‌ಗೆ ಐಸ್ ತುಂಬಿಸಿ ದಕ್ಕೆಯಲ್ಲಿ ನಿಲ್ಲಿಸಲಾಗಿತ್ತು.

ಅಂದು ರಾತ್ರಿ 9 ಗಂಟೆಗೆ ಕೆಲಸಗಾರರು ಊಟ ಮುಗಿಸಿ ಬೋಟ್‌ನಲ್ಲೇ ಮಲಗಿದ್ದರು. ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ಹೊರಡಲು ಎದ್ದಾಗ ಸರೋಜ್ ದಂಡಸಾನ ಅವರು ಬೋಟ್‌ನಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 29ರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳುತ್ತಿದ್ದ ಇತರ ಬೋಟಿನವರು, ದಕ್ಕೆಯ ಬಳಿ ಮೃತದೇಹವೊಂದು ನೀರಿನಲ್ಲಿ ತೇಲುತ್ತಿರುವುದಾಗಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಸರೋಜ್ ದಂಡಸಾನ ಅವರ ಮೃತದೇಹ ಎಂದು ದೂರುದಾರರು ತಿಳಿಸಿದ್ದಾರೆ.

ಅಕ್ಟೋಬರ್ 27ರ ರಾತ್ರಿ 9 ಗಂಟೆಯಿಂದ 11 ಗಂಟೆಯ ಮಧ್ಯಾವಧಿಯಲ್ಲಿ ಸರೋಜ್ ಅವರು ಮೂತ್ರ ವಿಸರ್ಜನೆಗೆ ಬೋಟ್‌ನ ಅಂಚಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 61/2026, ಕಲಂ 194 ಬಿಎನ್‌ಎಸ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರವಷ್ಟೇ ಹೆಚ್ಚಿನ ವಿಷಯಗಳು ತಿಳಿಯಲಿವೆ.

ಮಲ್ಪೆ ಪೊಲೀಸ್ ಠಾಣೆ

ಹಂಚಿಕೊಳ್ಳಿ: