ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕೊಲ್ಲೂರು: ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ, ನಾಲ್ವರಿಗೆ ಗಾಯ

ಕೊಲ್ಲೂರು ಗ್ರಾಮದ ದಳಿ ಬಳಿ ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ,...

· ಉಡುಪಿ
ರಸ್ತೆ ಅಪಘಾತ
ಹಂಚಿಕೊಳ್ಳಿ:

ಕೊಲ್ಲೂರು ಗ್ರಾಮದ ದಳಿ ಬಳಿ ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ದಿನಾಂಕ 25/10/2026 ರಂದು ಬೆಳಿಗ್ಗೆ 10:00 ಗಂಟೆಗೆ ಅಭಿಷೇಕ ಎನ್ ಎಂಬುವವರು KA-02-MS-1071 ನೋಂದಣಿಯ ಕಾರಿನಲ್ಲಿ ರುದ್ರಪ್ಪ ಹೆಚ್, ಜಿ.ಕೆ ಲಕ್ಷ್ಮಿ, ಕವಿತಾ ಆರ್ ಮತ್ತು ಚೆಂದ್ರಶೇನ ಬಿ ಅವರನ್ನು ನಿಟ್ಟೂರು ಕಡೆಯಿಂದ ಕೊಲ್ಲೂರು ಕಡೆಗೆ ಕರೆದೊಯ್ಯುತ್ತಿದ್ದರು.

ಚಾಲಕ ಅಭಿಷೇಕ ಎನ್ ಅವರು ಎದುರಿನ ಕಾರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿದ್ದಾರೆ. ಈ ವೇಳೆ ಎದುರಿನಿಂದ ಬಂದ ಜೀಪ್ ಅನ್ನು ಕಂಡು ನಿಯಂತ್ರಣ ತಪ್ಪಿದ ಕಾರು, ರಸ್ತೆಯ ಬಲಬದಿಯ ಕಾಡಿನೊಳಗೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಅಪಘಾತದಲ್ಲಿ ರುದ್ರಪ್ಪ ಹೆಚ್ ಅವರಿಗೆ ಹಣೆಗೆ ಹಾಗೂ ಬಲಗೈಗೆ ಒಳಜಖಂ, ಜಿ.ಕೆ ಲಕ್ಷ್ಮಿ ಅವರಿಗೆ ಮುಖಕ್ಕೆ ರಕ್ತಗಾಯ, ಚೆಂದ್ರಶೇನ ಅವರಿಗೆ ಸೊಂಟಕ್ಕೆ ಒಳಜಖಂ ಉಂಟಾಗಿದೆ. ಚಾಲಕ ಅಭಿಷೇಕ ಎನ್ ಅವರಿಗೂ ಸಹ ಬಲಗೈಗೆ ಗಾಯಗಳಾಗಿವೆ. ಕವಿತಾ ಆರ್ ಅವರಿಗೆ ಯಾವುದೇ ಗಾಯವಾಗಿರುವುದಿಲ್ಲ ಎಂದು ವರದಿಯಾಗಿದೆ.

ಗಾಯಾಳುಗಳು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2026, ಕಲಂ 281, 125(a) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಕೊಲ್ಲೂರು ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 59/2026

ಹಂಚಿಕೊಳ್ಳಿ: