ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕಾರ್ಕಳ: ಕಾರು ಮಾರಾಟದ ನೆಪದಲ್ಲಿ ವ್ಯಕ್ತಿಗೆ 4.35 ಲಕ್ಷ ರೂಪಾಯಿ ವಂಚನೆ

ಕಾರ್ಕಳದ ಬಾಲಕೃಷ್ಣ ರಾವ್ ಎಂಬುವವರು ಫೇಸ್‌ಬುಕ್‌ನಲ್ಲಿ ಕಂಡ ಕಾರು ಮಾರಾಟದ ಜಾಹೀರಾತನ್ನು ನಂಬಿ ಹಣ ಕಳೆದುಕೊಂಡಿದ್ದು, ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಪ್ರಕಾರ, ಆಗಸ್ಟ...

· ಉಡುಪಿ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಕಾರ್ಕಳದ ಬಾಲಕೃಷ್ಣ ರಾವ್ ಎಂಬುವವರು ಫೇಸ್‌ಬುಕ್‌ನಲ್ಲಿ ಕಂಡ ಕಾರು ಮಾರಾಟದ ಜಾಹೀರಾತನ್ನು ನಂಬಿ ಹಣ ಕಳೆದುಕೊಂಡಿದ್ದು, ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಪ್ರಕಾರ, ಆಗಸ್ಟ್ 20, 2026 ರಂದು ಬಾಲಕೃಷ್ಣ ರಾವ್ ಅವರು ಫೇಸ್‌ಬುಕ್‌ನಲ್ಲಿ KA-05 NK-2712 ನಂಬರಿನ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಜಾಹೀರಾತು ನೋಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದ್ದರು. ತಕ್ಷಣವೇ 8050085834 ಸಂಖ್ಯೆಯಿಂದ ಕರೆ ಮಾಡಿದ ರವಿಚಂದ್ರ ಎಂಬಾತ ತಾನು ಚಿಕ್ಕಮಗಳೂರಿನ ಡಾಕ್ಟರ್ ಎಂದು ಪರಿಚಯಿಸಿಕೊಂಡು, 4,50,000 ರೂಪಾಯಿಗೆ ಕಾರು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.

ಆರೋಪಿತನ ಮಾತು ನಂಬಿದ ಬಾಲಕೃಷ್ಣ ರಾವ್ ಅವರು, ಆಗಸ್ಟ್ 20 ರಂದು 45,000 ರೂಪಾಯಿ, ಆಗಸ್ಟ್ 21 ರಂದು 3,00,000 ರೂಪಾಯಿ RTGS ಮೂಲಕ ಹಾಗೂ ಮತ್ತೆ 45,000 ರೂಪಾಯಿ, ಮತ್ತು ಆಗಸ್ಟ್ 22 ರಂದು 45,000 ರೂಪಾಯಿಯನ್ನು ಆರೋಪಿತನು ನೀಡಿದ ಖಾತೆಗಳಿಗೆ ಪಾವತಿಸಿದ್ದಾರೆ.

ಹಣ ಪಾವತಿಸಿದ ಬಳಿಕ ಬಾಲಕೃಷ್ಣ ರಾವ್ ಅವರು ಕಾರು ಪಡೆಯಲು ಆರೋಪಿತನು ನೀಡಿದ ಚಿಕ್ಕಮಗಳೂರಿನ ಮತ್ತಿಕೆರೆಗೆ ತೆರಳಿದ್ದಾರೆ. ಆದರೆ ಅಲ್ಲಿ ಅಂತಹ ಯಾವುದೇ ವ್ಯಕ್ತಿ ಇರಲಿಲ್ಲ. ನಂತರ ಆರೋಪಿತನಿಗೆ ಕರೆ ಮಾಡಿದಾಗ, ಕಾರು ಕೆಟ್ಟು ನಿಂತಿದೆ ಎಂದು ಸಬೂಬು ಹೇಳಿ, ಕಾರು ಕೊಡದೆ ಹಾಗೂ ಹಣವನ್ನೂ ವಾಪಸ್ ನೀಡದೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026, ಕಲಂ 66(D) ಐ.ಟಿ. ಆಕ್ಟ್ ಮತ್ತು 318(4) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಅಪರಾಧ ಕ್ರಮಾಂಕ 89/2026

ಹಂಚಿಕೊಳ್ಳಿ: