ಬ್ರಹ್ಮಾವರ: ಬೈಕಾಡಿಯಲ್ಲಿ ಪೈಪ್ನಿಂದ ಹಲ್ಲೆ ನಡೆಸಿ ವ್ಯಕ್ತಿಯ ಹತ್ಯೆಗೈದ ಆರೋಪ
ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಎಂಬುವರು ಸುಜಿತ್ ಪಿಂಟೋ ಹಾಗೂ ಜೀವನ ಪೂಜಾರಿ ಮೇಲೆ ಹಲ್ಲೆ ನಡೆಸಿ, ಸುಜಿತ್ ಪಿಂಟೋನ ಕೊಲೆಗೈದಿರುವ ಬಗ್ಗೆ ಬ...

ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಎಂಬುವರು ಸುಜಿತ್ ಪಿಂಟೋ ಹಾಗೂ ಜೀವನ ಪೂಜಾರಿ ಮೇಲೆ ಹಲ್ಲೆ ನಡೆಸಿ, ಸುಜಿತ್ ಪಿಂಟೋನ ಕೊಲೆಗೈದಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ದಿನಾಂಕ 27/10/2026 ರಂದು ರಾತ್ರಿ ಆರೋಪಿಗಳು ಜೀವನ ಪೂಜಾರಿ ಮತ್ತು ಸುಜಿತ್ ಪಿಂಟೋ ಅವರನ್ನು ಭದ್ರಗಿರಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ಆರೋಪಿಗಳು ಅವಾಚ್ಯವಾಗಿ ಬೈದು, ಪ್ರಮೋದ ಪೂಜಾರಿಯು ಜೀವನ ಪೂಜಾರಿಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಲಾಗಿದೆ.
ಪ್ರದೀಪ್ ಪೂಜಾರಿಯು ಸುಜಿತ್ ಪಿಂಟೋನನ್ನು ಗಟ್ಟಿಯಾಗಿ ಹಿಡಿದುಕೊಂಡಾಗ, ಪ್ರಮೋದ ಪೂಜಾರಿಯು ತನ್ನ ಪ್ಯಾಂಟಿನಲ್ಲಿದ್ದ ಸ್ಟೀಲ್ ಪೈಪ್ನಿಂದ ಸುಜಿತ್ ಪಿಂಟೋನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದರಿಂದ ಸುಜಿತ್ ಪಿಂಟೋ ತಲೆ ಮತ್ತು ಮುಖಕ್ಕೆ ಗಂಭೀರ ರಕ್ತಗಾಯಗಳಾಗಿವೆ.
ಜೀವನ ಪೂಜಾರಿ ತಪ್ಪಿಸಿಕೊಂಡು ಓಡುವಾಗ ಆರೋಪಿಗಳು ಆತನನ್ನು ಬೆನ್ನಟ್ಟಿ ಬಂದು ಬಲಕೈಗೆ ಮತ್ತು ಎಡಕಾಲಿನ ಗಂಟಿಗೆ ಪೈಪ್ನಿಂದ ಹೊಡೆದು ಬೆದರಿಕೆ ಹಾಕಿದ್ದಾರೆ. ಬಳಿಕ ಆರೋಪಿಗಳು ಸ್ಕೂಟಿ ಮತ್ತು ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಜೀವನ ಪೂಜಾರಿ ಸ್ಥಳಕ್ಕೆ ಬಂದು ನೋಡಿದಾಗ, ಸುಜಿತ್ ಪಿಂಟೋ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿ, ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿದ್ದನು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 202/2026 ರ ಅಡಿಯಲ್ಲಿ ಕಲಂ 352, 351(1), 115(2), 118(1), 103 ಜೊತೆಗೆ 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಬ್ರಹ್ಮಾವರ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 202/2026


