ಬೆಂಗಳೂರು: ಆಸ್ತಿಗಾಗಿ 15 ವರ್ಷದ ಬಾಲಕನ ಹತ್ಯೆಗೈದ ಚಿಕ್ಕಪ್ಪ, ಠಾಣೆಗೆ ತೆರಳಿ ಶರಣು
ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ 1 ಎಕರೆ ಜಮೀನು ವಿವಾದದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕ ಕೃಷ್ಣನನ್ನು ಆತನ ಚಿಕ್ಕಪ್ಪ ಮೋಹನ್ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಕಲಿ ಸಹಿ ಮಾಡಿ ಜಮೀನು ಮಾರಿದ್ದ ಆರೋಪಿಗೆ...

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ 1 ಎಕರೆ ಜಮೀನಿನ ವಿವಾದದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕ ಕೃಷ್ಣನನ್ನು ಆತನ ಚಿಕ್ಕಪ್ಪ ಮೋಹನ್ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಪಿತ್ರಾರ್ಜಿತ ಆಸ್ತಿಯನ್ನು ನಕಲಿ ಸಹಿ ಬಳಸಿ ಮಾರಾಟ ಮಾಡಿದ್ದ ವಿಷಯದಲ್ಲಿ ಉಂಟಾದ ಕಲಹವೇ ಈ ಕೃತ್ಯಕ್ಕೆ ಕಾರಣವಾಗಿದೆ. ಸೋಮವಾರ ರಾತ್ರಿ ನಿದ್ರೆಯಲ್ಲಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ, ಆರೋಪಿಯು ಮಂಗಳವಾರ ಬೆಳಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.




