ಬೆಂಗಳೂರಿನಲ್ಲಿ 7 ಜನರ ಹತ್ಯೆಗೈದ ಇಂದುಶೇಖರ್ ರೌಡಿಶೀಟರ್ ರಮೇಶ್‌ನ ಸಹೋದರ
ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದ ಆರೋಪಿ ಇಂದುಶೇಖರ್, 8 ವರ್ಷಗಳ ಹಿಂದೆ ಕೋಟಿ ಮೌಲ್ಯದ ಆಸ್ತಿಗಾಗಿ ಅವಳಿ ಕೊಲೆ ನಡೆಸಿದ್ದ ಕಾಡುಗೋಡಿ ನಟೋರಿಯಸ್ ರೌಡಿಶೀಟರ್ ಬೆಳತೂರು ರಮೇಶ್‌ನ ಸಹೋದರ ಎಂಬ ಸ್ಫೋಟಕ ಮಾಹಿತಿ ಬಯಲಾಗ...

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಇಂದುಶೇಖರ್, ಕುಖ್ಯಾತ ರೌಡಿಶೀಟರ್ ಬೆಳತೂರು ರಮೇಶ್‌ನ ಸಹೋದರ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಎಂಟು ವರ್ಷಗಳ ಹಿಂದೆ 15 ಕೋಟಿ ಮೌಲ್ಯದ ಜಾಗಕ್ಕಾಗಿ ರಮೇಶ್ ಇಬ್ಬರನ್ನು ಹತ್ಯೆ ಮಾಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದನು. ಆಸ್ತಿಗಾಗಿ ನಕಲಿ ದಾಖಲೆ ಸೃಷ್ಟಿಸಿ ಕೃಷ್ಣಪ್ಪ ಮತ್ತು ಸುಧಾರಾಣಿ ಎಂಬುವರನ್ನು ಕೊಲೆ ಮಾಡಿದ್ದ ರಮೇಶ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ದಾಖಲಾಗಿತ್ತು. ಮೂರು ವರ್ಷಗಳ ಹಿಂದೆ ಜೈಲಿನಲ್ಲೇ ಸಾವನ್ನಪ್ಪಿದ್ದ ರಮೇಶ್‌ನಂತೆಯೇ ಇಂದುಶೇಖರ್ ಸಹ ಈಗ ಭೀಕರ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.



