ಬೆಳ್ಳಾರೆ: ಇತರೆ ಪ್ರಕರಣ
ದಿನಾಂಕ 05.11.20026 ರಂದು ಸಂಜೆ 4.00 ಗಂಟೆಗೆ ಬೆಳ್ಳಾರೆ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಮುರುಗೇಶ್ ರವರಿಗೆ ಅವರ ಬೀಟು ಉಸ್ತುವಾರಿಯಲ್ಲಿರುವ ಸುಳ್ಯ ತಾಲೂಕು ಮುಪ್ಪೇರಿಯ ಗ್ರಾಮದ ಉರುಂಬಿ ಸುಧಾಕರ ...

ದಿನಾಂಕ 05.11.20026 ರಂದು ಸಂಜೆ 4.00 ಗಂಟೆಗೆ ಬೆಳ್ಳಾರೆ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಮುರುಗೇಶ್ ರವರಿಗೆ ಅವರ ಬೀಟು ಉಸ್ತುವಾರಿಯಲ್ಲಿರುವ ಸುಳ್ಯ ತಾಲೂಕು ಮುಪ್ಪೇರಿಯ ಗ್ರಾಮದ ಉರುಂಬಿ ಸುಧಾಕರ ರೈ ರವರ ಮನೆಯ ಬಳಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ಪಟಾಕಿ ದಾಸ್ತನು ಇಟ್ಟಿರುತ್ತಾರೆ ಎಂಬುದಾಗಿ ಮಾಹಿತಿ ಬಂದಂತೆ ಮಾಹಿತಿ ಬಂದ ಸ್ಥಳವಾದ ಉರುಂಬಿ ಎಂಬಲ್ಲಿಗೆ ಸುಧಾಕರ ರೈ ರವರ ಮನೆಯ ಅಂಗಳದಲ್ಲಿ ಇದ್ದ ಸುಧಾ ಟ್ರೇಡರ್ಸ್ ಬಾಳಿಲ ಅಡಿಕೆ ಖರೀದಿ ಮತ್ತು ಸಂಸ್ಕರಣ ಕೇಂದ್ರ ಎಂಬ ಹೆಸರಿನಲ್ಲಿ ಅಡಿಕೆ ಗಾರ್ಬಲ್ ಕಟ್ಟಡದ ಎದುರು ಸಿಟ್ ಔಟ್ ಇರುವ ಸ್ಥಳದಲ್ಲಿ ನೆಲದ ಮೇಲೆ ಕೆಲವು ರಟ್ಟಿನ ಬಾಕ್ಸ್ ಗಳನ್ನು ಇರಿಸಿರುವುದು ಕಂಡು ಬಂದಿದ್ದು, ಇದರ ಬಗ್ಗೆ ಅಲ್ಲಿದ್ದ ಮನೆಯ ಮಾಲಿಕ ಸುಧಾಕರ ರೈ (55), ರವರನ್ನು ವಿಚಾರಿಸಿದಾಗ ಇವರು ಇದು ಪಟಾಕಿಗಳು ಇರುವ ಬಾಕ್ಸ್ ಎಂದು ತಿಳಿಸಿದ್ದು,ಇವುಗಳನ್ನು ಪಟಾಕಿ ಮಾರಾಟಕ್ಕೆ ತಂದಿರುವುದಾಗಿದೆ ತಿಳಿಸಿರುತ್ತಾರೆ. ಇದನ್ನು ಇಲ್ಲಿ ದಾಸ್ತನು ಇರಿಸುವರೇ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಿದಾಗ ಇವರು ಇರುವುದಿಲ್ಲವೆಂದು ತಿಳಿಸಿದರು. ಸುಧಾಕರ ರೈ ರವರು ಅವರ ಮನೆಯ ಎದುರು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈ ಗೊಳ್ಳದೆ ಹಾಗೂ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಟಾಕಿ ಸ್ಪೋಟಕ ಗಳನ್ನು ಮಾನವ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅನಧಿಕೃತವಾಗಿ ದಾಸ್ತನು ಇರಿಸಿ ನಿರ್ಲಕ್ಷತನ ವಹಿಸಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ: 66/2026 ಕಲಂ: 287,228 BNS-2023 ಕಲಂ:9(B),(b), Explosives Act ಯಂತೆ ಪ್ರಕರಣ ದಾಖಲಾಗಿರುತ್ತದೆ


