ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಬೈಂದೂರು: ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಮತ್ತು ಸಹಸವಾರೆಗೆ ಗಂಭೀರ ಗಾಯ

ಬೈಂದೂರಿನ ಯಡ್ತರೆ ಗ್ರಾಮದ ತಾಲೂಕು ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ 66 ಜಂಕ್ಷನ್‌ನಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರ...

· ಉಡುಪಿ
ರಸ್ತೆ ಅಪಘಾತ
ಹಂಚಿಕೊಳ್ಳಿ:

ಬೈಂದೂರಿನ ಯಡ್ತರೆ ಗ್ರಾಮದ ತಾಲೂಕು ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ 66 ಜಂಕ್ಷನ್‌ನಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ನವೆಂಬರ್ 7ರ ಸಂಜೆ 18:00 ಗಂಟೆಗೆ ನಾಗರಾಜ ಅವರು ತಮ್ಮ ಬೈಕ್‌ನಲ್ಲಿ ಶ್ವೇತಾ ಎಂಬುವವರನ್ನು ಹಿಂಬದಿಯಲ್ಲಿ ಕುರಿಸಿಕೊಂಡು ಯಡ್ತರೆ ಗ್ರಾಮದ ಯೋಜನಾ ನಗರದಿಂದ ದೊಂಬೆ ಕರಾವಳಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಶಿರೂರು ಕಡೆಗೆ ಹೋಗಲು ಸರ್ವಿಸ್ ರಸ್ತೆಯ ಅಂಚಿನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದರು.

ಅದೇ ಸಮಯದಲ್ಲಿ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬಂದ KA-19-AD-7989 ಲಾರಿಯ ಚಾಲಕ, ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರ ಎಡಕ್ಕೆ ತಿರುಗಿಸಿ, ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಅಪಘಾತದ ಪರಿಣಾಮ ಬೈಕ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು, ನಾಗರಾಜ ಅವರ ಎಡಗಾಲಿನ ಮೊಣಗಂಟಿನ ಬಳಿ ತರಚಿದ ಗಾಯ ಮತ್ತು ಬಲಗಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದೆ. ಸಹಸವಾರಳಾದ ಶ್ವೇತಾ ಅವರ ಬಲಗಾಲು ಮತ್ತು ಎಡಭುಜದ ಬಳಿ ಒಳನೋವು ಉಂಟಾಗಿದೆ.

ಗಾಯಾಳುಗಳನ್ನು ಕೂಡಲೇ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 163/2026, ಕಲಂ 281 ಮತ್ತು 125(a) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಬೈಂದೂರು ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 163/2026

ಹಂಚಿಕೊಳ್ಳಿ: