ಯರಗಟ್ಟಿಯಲ್ಲಿ ಮ್ಯಾಚ್ ಬಾಕ್ಸ್ ಶೋರೂಂ ಆರಂಭಿಸಿದ ಗಾಯಕ ಬಾಳು ಬೆಳಗುಂದಿ
ಸರಿಗಮಪ ಖ್ಯಾತಿಯ ಜನಪದ ಗಾಯಕ ಬಾಳು ಬೆಳಗುಂದಿ ಅವರು ಬೆಳಗಾವಿಯ ಯರಗಟ್ಟಿಯಲ್ಲಿ 'ಮ್ಯಾಚ್ ಬಾಕ್ಸ್' ಎಂಬ ಹೊಸ ಬಟ್ಟೆ ಶೋರೂಂ ಆರಂಭಿಸಿದ್ದಾರೆ. ಈ ಉದ್ಘಾಟನಾ ಸಮಾರಂಭಕ್ಕೆ ಹನುಮಂತ ಲಮಾಣಿ ಸೇರಿದಂತೆ ಉತ್ತರ ಕರ್ನಾಟಕದ 9 ಜನ...

ಸರಿಗಮಪ ಖ್ಯಾತಿಯ ಜನಪದ ಗಾಯಕ ಬಾಳು ಬೆಳಗುಂದಿ ಅವರು ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಮ್ಯಾಚ್ ಬಾಕ್ಸ್ ಎಂಬ ಹೆಸರಿನ ಬಟ್ಟೆ ಶೋರೂಂ ಅನ್ನು ಪ್ರಾರಂಭಿಸಿದ್ದಾರೆ. ಬಾಗಲಕೋಟೆ ರಸ್ತೆಯ ಸತ್ತಿಗೇರಿ ಕ್ರಾಸ್ನಲ್ಲಿ ಆರಂಭವಾಗಿರುವ ಈ ಮಳಿಗೆಯ ಉದ್ಘಾಟನಾ ಸಮಾರಂಭಕ್ಕೆ ಹನುಮಂತ ಲಮಾಣಿ, ಮಾಳು ನಿಪನಾಳ, ಬೊಂಬಾಟ್ ಬಸಣ್ಣ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು 9 ಜನ ಗಾಯಕರು ಆಗಮಿಸಿದ್ದರು. ಗಾಯಕರ ಆಗಮನದಿಂದಾಗಿ ಉದ್ಘಾಟನಾ ಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಭವಿಷ್ಯದಲ್ಲಿ ಉದ್ಯಮವನ್ನು ವಿಸ್ತರಿಸುವ ಗುರಿ ಹೊಂದಿರುವ ಬಾಳು ಬೆಳಗುಂದಿ, ತಮ್ಮ ಗಾಯನ ವೃತ್ತಿಯ ಜೊತೆಗೆ ಸ್ವಾವಲಂಬಿ ಬದುಕಿಗಾಗಿ ಈ ಹೊಸ ಉದ್ಯಮದ ಮೆಟ್ಟಿಲೇರಿದ್ದಾರೆ.




