ಬೆಂಗಳೂರು: ಹರ್ಷಿತ್ ಪೋರೆಚಾ ಜೊತೆ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಮೂಲ್ಯ ಭಾರದ್ವಾಜ್
'ಪವಿತ್ರ ಬಂಧನ' ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಭಾರದ್ವಾಜ್ ಅವರು ಹರ್ಷಿತ್ ಪೋರೆಚಾ ಎಂಬುವವರನ್ನು ಸದ್ದಿಲ್ಲದೆ ವಿವಾಹವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಅವರು ಅಭಿ...

ಪವಿತ್ರ ಬಂಧನ ಧಾರಾವಾಹಿಯ ಖ್ಯಾತ ನಟಿ ಅಮೂಲ್ಯ ಭಾರದ್ವಾಜ್ ಅವರು ಹರ್ಷಿತ್ ಪೋರೆಚಾ ಎಂಬುವವರನ್ನು ಮದುವೆಯಾಗಿದ್ದಾರೆ. ಮೈಸೂರು ಮೂಲದ ನಟಿ ಈ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದ ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹೊಸ ಜೀವನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪುರಂದರದಾಸ ಮತ್ತು ಬೃಂದಾವನ ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ, ಸದ್ಯ ಪವಿತ್ರಾ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ನವಜೋಡಿಗೆ ಕಿರುತೆರೆ ಕಲಾವಿದರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.




