ಪೆರ್ನೂರಿನ ಗ್ಯಾಂಗ್ಸ್ಟರ್ ಕಥಾಹಂದರದ ಅಕ್ಕ ವೆಬ್ ಸೀರೀಸ್ ಅಕ್ಟೋಬರ್ 30ಕ್ಕೆ ನೆಟ್ಫ್ಲಿಕ್ಸ್ನಲ್ಲಿ
ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ನಟನೆಯ ‘ಅಕ್ಕ’ ವೆಬ್ ಸೀರೀಸ್ನ ಟೀಸರ್ ಅನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿದೆ. 1980ರ ದಶಕದ ಗ್ಯಾಂಗ್ಸ್ಟರ್ ಡ್ರಾಮಾ ಆಗಿರುವ ಈ ಸೀರೀಸ್ನಲ್ಲಿ ಕೀರ್ತಿ ಸುರೇಶ್ ‘ಭವಾನಿ’..

ಧರ್ಮರಾಜ್ ಶೆಟ್ಟಿ ನಿರ್ದೇಶನದ ಅಕ್ಕ ವೆಬ್ ಸೀರೀಸ್ ಟೀಸರ್ ಅನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿದೆ. 1980ರ ದಶಕದ ಪೆರ್ನೂರು ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಕೀರ್ತಿ ಸುರೇಶ್ ಭವಾನಿ ಪಾತ್ರದಲ್ಲಿ ಮತ್ತು ರಾಧಿಕಾ ಆಪ್ಟೆ ರುದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಆರ್ಎಫ್ ಎಂಟರ್ಟೈನ್ಮೆಂಟ್ ನಿರ್ಮಾಣದ ಈ ಸರಣಿಯಲ್ಲಿ ತನ್ವಿ ಆಜ್ಮಿ ಕೂಡ ನಟಿಸಿದ್ದು, ಅಧಿಕಾರ ಹಾಗೂ ಸಂಪ್ರದಾಯದ ಸುತ್ತ ಕಥೆ ಹೆಣೆಯಲಾಗಿದೆ. ಅಕ್ಟೋಬರ್ 30ರಂದು ಈ ವೆಬ್ ಸೀರೀಸ್ ಪ್ರೇಕ್ಷಕರ ಮುಂದೆ ಬರಲಿದೆ.




