ಬೆಂಗಳೂರಿನಲ್ಲಿ ರಾಮಾಯಣ ಚಿತ್ರದ ಬಜೆಟ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಯಶ್
ಬಾಲಿವುಡ್ನ ಪ್ಯಾನ್ ವರ್ಲ್ಡ್ 'ರಾಮಾಯಣ' ಚಿತ್ರದ ಬಜೆಟ್ ಬಗ್ಗೆ ಮಾತನ್ನಾಡುತ್ತ ಯಶ್ ಅವರು ‘ನಮ್ಮ ಚಿತ್ರದ ನಿರ್ಮಾಣದಲ್ಲಿ ನನ್ ಪಾರ್ಟ್ನರ್ ಆಗಿರುವ ನಮಿತ್ ಮಲ್ಹೋತ್ರಾ ಅವರು ಅಮೆರಿಕಾದಲ್ಲಿ ಪ್ರಮೋಶನ್ ಮಾಡುತ್ತಿದ್ದಾರ...

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಯಶ್ ರಾಮಾಯಣ ಚಿತ್ರದ ಬಜೆಟ್ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಚಿತ್ರದ ಒಟ್ಟು ಬಜೆಟ್ 4000 ಕೋಟಿ ರೂಪಾಯಿ ಎಂದು ಅವರು ಅಧಿಕೃತವಾಗಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ನಮಿತ್ ಮಲ್ಹೋತ್ರಾ ಅವರು ವ್ಯವಹಾರದ ದೃಷ್ಟಿಯಿಂದ 6000 ಕೋಟಿ ಎಂದು ಹೇಳಿದ್ದರೂ, ವಾಸ್ತವಿಕ ವೆಚ್ಚ 4000 ಕೋಟಿ ಮಾತ್ರ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಚಿತ್ರರಂಗದ ಏಕತೆಯನ್ನು ಪ್ರತಿಪಾದಿಸಿದ ಅವರು, ಈ ಬೃಹತ್ ಯೋಜನೆಯನ್ನು ಬೆಂಬಲಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದರು.




