ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸಿನಿಮಾ

ಗಡಿ ಪ್ರದೇಶವಾದ ಈ ಜಿಲ್ಲೆಯಲ್ಲಿ 8 ದಿನಗಳಿಂದ 'ಪ್ರೇಮದ ಊರಲಿ' ನೋಡಲು ಕುಟುಂಬ ಸಮೇತ ಕಿಕ್ಕಿರಿದ ಜನ!

ಪಾವಗಡದ ಶ್ರೀ ಮಾರುತಿ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಕನ್ನಡ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತನ ಬದುಕು, ಹಸಿರು ಹೊಲ ಮತ್ತು ತಂದೆ-ಮಗನ ಬಾಂಧವ್ಯದ ಕಥೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸ...

ಗಡಿ ಪ್ರದೇಶವಾದ ಈ ಜಿಲ್ಲೆಯಲ್ಲಿ 8 ದಿನಗಳಿಂದ 'ಪ್ರೇಮದ ಊರಲಿ' ನೋಡಲು ಕುಟುಂಬ ಸಮೇತ ಕಿಕ್ಕಿರಿದ ಜನ!
ಹಂಚಿಕೊಳ್ಳಿ:

ಪಾವಗಡ (ಅ.10): ಪಟ್ಟಣದ ಶ್ರೀ ಮಾರುತಿ ಟಾಕೀಸ್‌ಗೆ ಪ್ರತಿ ದಿನ ನಾಲ್ಕು ಪ್ರದರ್ಶನದಂತೆ ತೆರೆ ಕಾಣುತ್ತಿರುವ ನೂತನ ಕನ್ನಡ ಪ್ರೇಮದ ಊರಲಿ ಚಿತ್ರಕ್ಕೆ ಕಳೆದ 8 ದಿನಗಳಿಂದ ಗ್ರಾಮೀಣ ಹಾಗೂ ನಗರದ ಪ್ರೇಕ್ಷಕರು ಕಿಕ್ಕಿರಿದು ಬರುತ್ತಿದ್ದು, ಬಹುದಿನಗಳ ನಂತರ ಚಿತ್ರಮಂದಿರದಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದ್ದು ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.

ಗಡಿ ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡಿ, ಪ್ರೇಮದ ಊರಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಕಲೆಕ್ಷನ್ ಆಗುತ್ತಿರುವುದು ವಿಶೇಷವಾಗಿದೆ. ರಾಜ್ಯಾದ್ಯಂತ ಈಗ ಸೂಪರ್ ಹಿಟ್ ಆಗಿರುವ ಈ ಚಿತ್ರ ಕಳೆದ ಸೆ.25 ಬಿಡುಗಡೆಯಾಗಿದ್ದು, ಚಿತ್ರದ ನಾಯಕ ನಟ ಶ್ರೀರಾಮ್‌, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅಭಿನಯ ಸೇರಿದಂತೆ ರಂಗಾಯಣ ರಘು, ಗೋವಿಂದೇ ಗೌಡರ ಮುಖ್ಯ ಪಾತ್ರ ಜನಮನ ಸೆಳೆದಿದೆ.

ಸಂಗೀತ ಸುನಾದ್ ಗೌತಮ್‌ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ (ಅಕ್ಷಿ ಖ್ಯಾತಿ) ಚಿತ್ರದ ನಿರ್ದೇಶಕರಾಗಿ, ಮಮತಾ ದೇವೇಂದ್ರ ಎಂ., ಪ್ರಶಾಂತ್ ಡಿ.ಎಸ್., ರಮೇಶ ಎನ್.ವೆನಿಲ್ಲಾ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಅ.2ರಿಂದ ಇಲ್ಲಿನ ಮಾರುತಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದು, ಕಳೆದ ಎಂಟು ದಿನಗಳಿಂದ ಜನ ಸಾಗರವೇ ಹರಿದುಬರುತ್ತಿದ್ದು, ಹಸಿರು ಹೊಲ, ರೈತನ ಬದುಕು, ತಂದೆ- ಮಗನ ಬಾಂಧವ್ಯದ ಕೌಟುಂಬಿಕ ಕಥೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ದೇಶದಾದ್ಯಂತ ಚರ್ಚೆ

ಇನ್ನು ಕನ್ನಡ ಚಿತ್ರರಂಗದಲ್ಲಿ ಕೆಲವೊಮ್ಮೆ ಯಾವುದೇ ದೊಡ್ಡ ಸ್ಟಾರ್‌ಗಳ ಹಂಗಿಲ್ಲದೆ, ಭಾರಿ ಬಜೆಟ್‌ಗಳ ಬೆಂಬಲವಿಲ್ಲದೆ ಬಂದ ಸಿನಿಮಾಗಳೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಜಾಗ ಪಡೆದುಕೊಳ್ಳುತ್ತವೆ. ಇದೀಗ ಅಂತಹದ್ದೇ ಒಂದು ಅಚ್ಚರಿಯ ಯಶಸ್ಸಿನ ಕಥೆ ‘ಪ್ರೇಮದ ಊರಲಿ’ ಸಿನಿಮಾದಿಂದ ಬರೆಯಲ್ಪಡುತ್ತಿದೆ. ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ಈ ಸರಳ-ಸುಂದರ ಕನ್ನಡ ಸಿನಿಮಾ ಬಿಡುಗಡೆಯಾದ ಬಳಿಕ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದೀಗ ಕರ್ನಾಟಕದ ಗಡಿಯನ್ನು ದಾಟಿ ದೇಶದಾದ್ಯಂತ ಚರ್ಚೆಯಾಗುತ್ತಿದೆ.

ಹಂಚಿಕೊಳ್ಳಿ: