ಅಮಿತಾಬ್ ಬಚ್ಚನ್: ಹುಟ್ಟುಹಬ್ಬದ ದಿನ ಅಭಿಮಾನಿಗೆ ಹ್ಯಾಂಡ್ ಶೇಕ್ ನೀಡಲು ನಿರಾಕರಣೆ
ಮುಂಬೈ: ಹುಟ್ಟುಹಬ್ಬದ ವೇಳೆ ಬಾಲಿವುಡ್ ಬಿಗ್ ಬಿ ಅಮಿತ್ ಬಚ್ಚನ್ ಯುವ ಅಭಿಮಾನಿಯೊಬ್ಬರಿಗೆ ಹ್ಯಾಂಡ್ ಶೇಕ್ ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.ಏ...

ಮುಂಬೈ: ತಮ್ಮ ಜನ್ಮದಿನದ ಸಂದರ್ಭದಲ್ಲಿ ಬಾಲಿವುಡ್ ಬಿಗ್ ಬಿ ಅಮಿತ್ ಬಚ್ಚನ್ ಯುವ ಅಭಿಮಾನಿಯೊಬ್ಬರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದಾರೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಿನ್ನಾಭಿಪ್ರಾಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಏನಾಯಿತು?
ನಿಜ. ಅಕ್ಟೋಬರ್ 11ರ ಭಾನುವಾರ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯ ಮುಂದೆ ನೆರೆದಿದ್ದ ಕೆಲವು ಯುವ ಅಭಿಮಾನಿಗಳು, ಭದ್ರತಾ ಬೇಲಿಯನ್ನು ಮೀರಿ ಹ್ಯಾಂಡ್ ಶೇಕ್ ನೀಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರ ಅಂಗರಕ್ಷಕರು ಮಧ್ಯಪ್ರವೇಶಿಸಿ, ಆ ಅಭಿಮಾನಿಯನ್ನು ಹಿಂದಕ್ಕೆ ತಳ್ಳಿದ್ದಾರೆ. ಬಿಗ್ ಬಿ ಕೂಡಾ ಸೌಮ್ಯವಾಗಿ ಹಸ್ತಲಾಘವ ನೀಡಲು ನಿರಾಕರಿಸಿದ್ದಾರೆ.
ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಸನ್ನಿವೇಶವನ್ನು ನಿರ್ವಹಿಸಿದ ರೀತಿಯ ಬಗ್ಗೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದಿವೆ.
View this post on Instagram
ಕೆಲವು ಮಂದಿ ಅಮಿತಾಬ್ ಬಚ್ಚನ್ ಆ ಯುವ ಅಭಿಮಾನಿಯ ಮನವಿಯನ್ನು ಪುರಸ್ಕರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು ಭದ್ರತಾ ನಿಯಮಗಳನ್ನು ಪಾಲಿಸಬೇಕು ಮತ್ತು ನಟರಿಗೆ ತಮ್ಮದೇ ಆದ ವೈಯಕ್ತಿಕ ಮಿತಿಗಳನ್ನು ಕಾಪಾಡಿಕೊಳ್ಳುವ ಹಕ್ಕಿದೆ ಎಂದು ವಾದಿಸುತ್ತಿದ್ದಾರೆ.
ಬಿಗ್ ಬಿ ಅವರ 84ನೇ ಹುಟ್ಟುಹಬ್ಬ: ಅಮಿತಾಬ್ ಬಚ್ಚನ್ ಭಾನುವಾರ ಮುಂಬೈನಲ್ಲಿರುವ ತಮ್ಮ ನಿವಾಸ 'ಜಲ್ಸಾ'ದ ಬಳಿ ಸೇರಿದ್ದ ಅಭಿಮಾನಿಗಳನ್ನು ಕಾಣುವ ಮೂಲಕ ತಮ್ಮ 84ನೇ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.
ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮನೆಯ ಮುಂದೆ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸಿ ಮತ್ತು ಕೈಮುಗಿದು ನಮಸ್ಕರಿಸಿದ ಅವರು, ತಮ್ಮ ವಿಶೇಷ ದಿನದಂದು ಅಭಿಮಾನಿಗಳು ವ್ಯಕ್ತಪಡಿಸಿದ ಪ್ರೀತಿ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದ ತಿಳಿಸಿದರು.




