ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸಿನಿಮಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ನಿರಾಕರಿಸಿದ ಎಂ.ಜಿ. ಪುನೀತ್

ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನ ಉದ್ಯೋಗಿ ಪುನೀತ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾನೆ. ತಾನು ಯಾವುದೇ ಆರೋಪಿಗಳನ್ನು ನೋಡಿಲ್ಲ ಎಂದು ಹೇಳುವ ಮೂಲಕ ತನಿಖಾ ತಂಡಕ್ಕೆ ಶಾಕ್ ಕೊಟ್ಟಿದ್ದಾನೆ.

· ಬೆಂಗಳೂರು ನಗರ
ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ತಿರುವು: ನ್ಯಾಯಪೀಠದ ಮುಂದೆ ನಿಂತು ದರ್ಶನ್ ಗುರುತಿಸದ ಪ್ರಮುಖ ಸಾಕ್ಷಿ!
ಹಂಚಿಕೊಳ್ಳಿ:

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯ ವೇಳೆ ಪ್ರಮುಖ ತಿರುವು ಉಂಟಾಗಿದೆ. ಘಟನೆ ನಡೆದ ಸ್ಥಳವಾದ ಪಟ್ಟಣಗೆರೆ ಶೆಡ್‌ನ ಉದ್ಯೋಗಿ ಎಂ.ಜಿ. ಪುನೀತ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಾಗ ಆರೋಪಿಗಳನ್ನು ಗುರುತಿಸಲು ನಿರಾಕರಿಸಿದ್ದಾರೆ. ಈ ಹಿಂದೆ ಪೊಲೀಸರಿಗೆ ನೀಡಿದ್ದ ಹೇಳಿಕೆಯನ್ನು ಬದಲಿಸಿರುವ ಈತ, ನಟ ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳನ್ನು ತಾನು ನೋಡಿಲ್ಲ ಎಂದು ತಿಳಿಸಿದ್ದಾನೆ. ಘಟನೆ ನಡೆದ ದಿನದಂದು ತಾನು ಕೆಲಸದ ನಿಮಿತ್ತ ಶೆಡ್‌ನಲ್ಲಿದ್ದರೂ ಅಲ್ಲಿ ಯಾರೂ ಬಂದಿರಲಿಲ್ಲ ಎಂದು ಹೇಳುವ ಮೂಲಕ ಪ್ರಕರಣದಲ್ಲಿ ಹಾಸ್ಟೈಲ್ ಸಾಕ್ಷಿಯಾಗಿದ್ದಾನೆ. ಈ ಬೆಳವಣಿಗೆಯಿಂದ ತನಿಖಾ ತಂಡಕ್ಕೆ ಹಿನ್ನಡೆಯಾಗಿದ್ದು, ನ್ಯಾಯಾಲಯದಲ್ಲಿ ವಕೀಲರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.

ಹಂಚಿಕೊಳ್ಳಿ: