ಬಾಲಿವುಡ್ ಚಿತ್ರೀಕರಣದ ವೇಳೆ ನಟರಿಗೆ ಹಸ್ತಮೈಥುನಕ್ಕೆ ಸೂಚನೆ: ನಟಿ ನೈರಾ ಬ್ಯಾನರ್ಜಿ
ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಮನರಂಜನಾ ಉದ್ಯಮದಲ್ಲಿನ ಪ್ರಣಯ, ಹಾಟ್ ದೃಶ್ಯಗಳನ್ನು (intimate scenes) ಬಗ್ಗೆ ನಟಿಯೊಬ್ಬರು ಆಘಾತಕಾರಿ ವಿಷಯವೊಂದನ್ನು ಬಹಿರಂಗ...

ಬಾಲಿವುಡ್‌ನಲ್ಲಿ ಅಂತರಂಗದ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಟರು ಅಸ್ವಾಭಾವಿಕವಾಗಿ ವರ್ತಿಸುವುದನ್ನು ತಡೆಯಲು ವಿಚಿತ್ರ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ನಟಿ ನೈರಾ ಬ್ಯಾನರ್ಜಿ ತಿಳಿಸಿದ್ದಾರೆ. ಇಂತಹ ದೃಶ್ಯಗಳ ಚಿತ್ರೀಕರಣಕ್ಕೂ ಮುನ್ನ ನಟರು ಹಸ್ತಮೈಥುನ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗುತ್ತದೆ ಎಂದು ಅವರು ಪೋಡ್‌ಕಾಸ್ಟ್ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಸವಾರಿ 2 ಮತ್ತು ಟೈಗರ್ ಚಿತ್ರಗಳಲ್ಲಿ ಅಭಿನಯಿಸಿರುವ ನೈರಾ ಬ್ಯಾನರ್ಜಿ, ಚಿತ್ರೀಕರಣದ ವೇಳೆ ನಟರ ಉದ್ರೇಕವನ್ನು ನಿಯಂತ್ರಿಸಲು ಇಂತಹ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.




