ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸಿನಿಮಾ

Actor Nana patekar dies at 75: ಈ ಸಿನಿಮಾದಲ್ಲಿ ನಟ-ನಟಿಯಾಗಿ ಅಲ್ಲ, ಪೋಷಕ ನಟರಾಗಿಯೇ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡಿದ್ದ ನಾನಾ!

ನಾನಾ ಪಾಟೇಕರ್ ನಿಧನ: ಹಿರಿಯ ನಟ, ನಟ ಸಾಮ್ರಾಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರ...

· ಉಡುಪಿ
Actor Nana patekar dies at 75: ಈ ಚಿತ್ರದಲ್ಲಿ ನಟ ನಟಿ ಅಲ್ಲ, ಪೋಷಕ ನಟರಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು ನಾನಾ!
ಹಂಚಿಕೊಳ್ಳಿ:

ನಾನಾ ಪಾಟೇಕರ್ ನಿಧನ: ಹಿರಿಯ ನಟ, ನಟ ಸಾಮ್ರಾಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣ ಭಾರತೀಯ ಚಿತ್ರರಂಗಕ್ಕೆ ಆಘಾತವುಂಟು ಮಾಡಿದೆ.

ನಾನಾ ಪಾಟೇಕರ್ ನಿಧನ: ಹಿರಿಯ ನಟ, ನಟ ಸಾಮ್ರಾಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ನಂತರ ಅವರನ್ನು ತುರ್ತಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ನಾನಾ ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ಆಘಾತ ನೀಡಿದೆ.

ವಿಶ್ವನಾಥ್ ದಿನಕರ ರಾವ್ ಪಾಟೇಕರ್ ಅಲಿಯಾಸ್ ನಾನಾ ಪಾಟೇಕರ್. ಮರಾಠಿ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರು. ಮರಾಠಿ ರಂಗಭೂಮಿಯಿಂದ ಹಿಡಿದು ಬಾಲಿವುಡ್‌ವರೆಗೂ ಬೆಳೆದ ರೀತಿ ಅದ್ಭತ. ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಾನಾ ಪಾಟೇಕರ್ ನಂತರ ನಾನಾ ರೀತಿಯ ಕಷ್ಟ ಉಂಡವರು. ಮರಾಠಿ, ಬಾಲಿವುಡ್‌ನಲ್ಲಿ ಒಂದಕ್ಕಿಂತ ಒಂದು ಪವರ್ ಫುಲ್ ಸಿನಿಮಾ ನೀಡಿದರು.

ಸಿನಿಮಾಗಳಲ್ಲಿ ನಾನಾ ಅವರ ಪ್ರಕಾರ ಯಾವುದು ಎಂದು ಯಾರೂ ಕೇಳುವಂತಿರಲಿಲ್ಲ ಏಕೆಂದರೆ ನಾನಾ ಮಾಡದ ಪಾತ್ರಗಳೇ ಇಲ್ಲ. ಸಮಕಾಲೀನ ಚಿತ್ರಗಳಿಂದ ಹಿಡಿದು, ಹಾಸ್ಯ ಚಲನಚಿತ್ರಗಳವರೆಗೆ ನಾನಾ ತಮ್ಮ ಛಾಪು ಮೂಡಿಸಿದರು.

ಅವರು ಅನೇಕ ಹಿಂದಿ ಮತ್ತು ಮರಾಠಿ ಚಲನಚಿತ್ರಗಳು, ನಾಟಕಗಳಲ್ಲಿ ನಟಿಸಿದ್ದಾರೆ. ನಾನಾ ಪಾಟೇಕರ್ ನಾಯಕ, ಸಹ-ನಾಯಕ, ಖಳನಾಯಕ ಪೋಷಕ ಪಾತ್ರ ಹೀಗೆ ಮಾಡದ ಪಾತ್ರಗಳೇ ಇಲ್ಲ. ಎಲ್ಲ ಪ್ರಕಾರದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅವರನ್ನು ಯಾವುದೇ ಪ್ರಕಾರಕ್ಕೆ ಕಟ್ಟಿಹಾಕಲು ಸಾಧ್ಯವಿರಲಿಲ್ಲ ಹೀಗಾಗಿ ಅವರನ್ನ ಯಾವ ಪ್ರಕಾರ ಇಷ್ಟ ಎಂದು ಯಾರೂ ಕೇಳುತ್ತಿರಲಿಲ್ಲ. ನಾನಾ ಅವರ ಮರಾಠಿ ಚಲನಚಿತ್ರ 'ನಟಸಾಮ್ರಾಟ್' ವಿಶೇಷವಾಗಿದೆ.

ನಾನಾ ಪಾಟೇಕರ್ ಅವರ ನಟನಾ ವೃತ್ತಿಜೀವನವು ರಂಗಭೂಮಿಯಿಂದಲೇ ಪ್ರಾರಂಭವಾಯ್ತು. ಅವರು ಆರಂಭದಲ್ಲಿ ಮರಾಠಿ ನಾಟಕಗಳಲ್ಲಿ ದುಡಿದರು. ನಂತರ ಅವರು ಬಾಲಿವುಡ್ ಪ್ರವೇಶಿಸಿದರು ಮತ್ತು 1978 ರ 'ಗಮನ್' ಚಿತ್ರದೊಂದಿಗೆ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದಿನ ಕೆಲವು ವರ್ಷಗಳಲ್ಲಿ, ಅವರು ಮರಾಠಿ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ ನಟಿಸಿದರು. 1978 ರಲ್ಲಿ ಬಿಡುಗಡೆಯಾದ 'ಗಮನ್' ಚಿತ್ರದ ಮೂಲಕ ನಾನಾ ಪಾಟೇಕರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಪಾತ್ರ ತುಂಬಾ ಚಿಕ್ಕದಾಗಿದ್ದು, ಅವರು ಪ್ರೇಕ್ಷಕರ ಗಮನಕ್ಕೂ ಬರಲಿಲ್ಲ. ಮುಂದಿನ ಎಂಟು ವರ್ಷಗಳ ಕಾಲ ನಾನಾ ಚಿತ್ರದಲ್ಲಿ ತಮಗೆ ಸಾಧ್ಯವಾದ ಯಾವುದೇ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರೆಸಿದರು.

1988 ರ 'ಸಲಾಮ್ ಬಾಂಬೆ!' ಚಿತ್ರದಲ್ಲಿನ ಅವರ ಪಾತ್ರವು ಪ್ರೇಕ್ಷಕರು ಮತ್ತು ವಿಮರ್ಶಕರ ಗಮನ ಸೆಳೆಯಿತು. ಆದರೆ ವೃತ್ತಿಜೀವನಕ್ಕೆ ತಿರುವು ನೀಡಿದ್ದು 1989 ರಲ್ಲಿ ತೆರೆಕಂಡ 'ಪರಿಂದಾ' ಈ ಚಿತ್ರದಲ್ಲಿನ ಅಣ್ಣಾ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಗೆದ್ದರು. ಅವರ ಪವರ್‌ಫುಲ್ ಸಂಭಾಷಣೆ, ನಟನೆ ಶೈಲಿಯಿಂದಾಗಿ ಅವರು ವಿಭಿನ್ನ ನಟ ಎಂದು ಹೆಸರುವಾಸಿಯಾದರು.

ನಾನಾ ಪಾಟೇಕರ್–ಮನಿಷಾ ಕೊಯಿರಾಲಾ ಸಿನಿಮಾ ‘ಅಗ್ನಿಸಾಕ್ಷಿ’: ಇಂದು ನಾವು 1996ರಲ್ಲಿ ಬಿಡುಗಡೆಯಾದ ಒಂದು ಸೂಪರ್‌ಹಿಟ್ ಸಿನಿಮಾದ ಬಗ್ಗೆ ಹೇಳಲೇಬೇಕು. ಈ ಸಿನಿಮಾ ಹಾಲಿವುಡ್‌ನ ಒಂದು ಸಿನಿಮಾದ ರಿಮೇಕ್ ಆಗಿದೆ

ಈ ಚಿತ್ರದ ಅಭಿನಯಕ್ಕಾಗಿ ನಟ, ನಟಿಯ ಬದಲು ಪೋಷಕ ನಟನಾಗಿದ್ದ ನಾನಾ ಪಾಟೇಕರ್ ರಾಷ್ಟ್ರಪ್ರಶಸ್ತಿ ಗೆದ್ದರು.

ನೀವು ಈ ಸಿನಿಮಾ ನೋಡಿದ್ದೀರಾ? ನೋಡಿರದಿದ್ದರೆ ಒಮ್ಮೆ ನೋಡಿ, ಈ ಸಿನಿಮಾದ ಹೆಸರು ಅಗ್ನಿ ಸಾಕ್ಷಿ. ಈ ಚಿತ್ರದಲ್ಲಿ ನಾನಾ ಪಾಟೇಕರ್ ಜೊತೆಗೆ ಜಾಕಿ ಶ್ರಾಫ್, ನಟಿಯಾಗಿ ಮನೀಷಾ ಕೋಯಿರಾಲ ನಟಿಸಿದ್ದಾರೆ.

ಈ ಚಿತ್ರದಲ್ಲಿ ನಾನಾ ಪಾಟೇಕರ್ ಮುಖ್ಯ ನಟನಲ್ಲ, ಪೋಷಕ ನಟನಾಗಿ ಮಿಂಚಿದ್ದಾರೆ. ಆದರೂ ಇದನ್ನು ನಾನಾ ಪಾಟೇಕರ್ ಸಿನಿಮಾವೆಂದೇ ಕರೆಯಲಾಗುತ್ತಿದೆ. ಇದು ಸಂಗೀತ, ಪ್ರಣಯ, ಥ್ರಿಲ್ಲರ್ ಇರುವ ಸಿನಿಮಾವಾಗಿದೆ. ಈ ಸಿನಿಮಾ ಅವಧಿ 2 ಗಂಟೆ 22 ನಿಮಿಷದ್ದಾಗಿದೆ.

ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಾನಾ ಪಾಟೇಕರ್ ಅತ್ಯುತ್ತಮ ಪೋಷಕ ನಟ ರಾಷ್ಟ್ರ ಪ್ರಶಸ್ತಿ ಗೆದ್ದರು. ಅಷ್ಟೇ ಅಲ್ಲ ಈ ಚಿತ್ರ ಬಾಕ್ಸಾಫಿಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತು.

ನಾನಾ ಪಾಟೇಕರ್ ಪ್ರಮುಖ ಪಾತ್ರ ಪೋಷಕ ನಟನಾಗಿ ನಟಿಸಿರುವ ಅಗ್ನಿ ಸಾಕ್ಷಿ ಸಿನಿಮಾ 1991 ರಲ್ಲಿ ಬಿಡುಗಡೆಯಾದ ಹಾಲಿವುಡ್‌ ಚಿತ್ರದ 'ಸ್ಲೀಪಿಂಗ್ ವಿಥ್ ದಿ ಎನಿಮಿಯ' ಚಿತ್ರದ ರಿಮೇಕ್ ಆಗಿದೆ. ಈ ಚಿತ್ರವನ್ನು ಫಾರ್ಥೋ ಘೋಷ್ ನಿರ್ದೇಶಿಸಿದ್ದು, ಚಿತ್ರಕಥೆಯನ್ನ ಹೃದಯ್ ಲಾನಿ ಮತ್ತು ರಣಬೀರ್ ಪುಷ್ಪ್ ಅವರು ಬರೆದಿದ್ದಾರೆ. ಈ ಸಿನಿಮಾ iMDb ನಲ್ಲಿ 6.2 ರೇಟಿಂಗ್ ಹೊಂದಿದೆ. ZEES ನಲ್ಲಿ ನೋಡಬಹುದು.

ಹಂಚಿಕೊಳ್ಳಿ: