ಆಂಧ್ರಪ್ರದೇಶ: ಪತ್ನಿ ಅನ್ನಾ ಲೆಜಿನೋವಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಹಾಗೂ ಅನ್ನಾ ಕೊನಿಡೆಲಾ ಡಿವೋರ್ಸ್ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಯಾರು? ಅವರ ಹಿನ್ನೆಲೆ ಏನು? ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಅನ್ನಾ ಅವರ ಆಸ್ತ...

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಪತ್ನಿ ಅನ್ನಾ ಲೆಜಿನೋವಾ ಅವರಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 2013ರಲ್ಲಿ ವಿವಾಹವಾಗಿದ್ದ ಈ ದಂಪತಿ 13 ವರ್ಷಗಳ ದಾಂಪತ್ಯದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಮಾಜಿ ಮಾಡೆಲ್ ಆಗಿರುವ ಅನ್ನಾ ಲೆಜಿನೋವಾ ಸಿಂಗಾಪುರದಲ್ಲಿ ಉದ್ಯಮಗಳನ್ನು ಹೊಂದಿದ್ದು, ಅವರ ಆಸ್ತಿ ಮೌಲ್ಯ ಸುಮಾರು 1800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಇಬ್ಬರಿಗೂ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗನಿದ್ದು, ಪವನ್ ಕಲ್ಯಾಣ್ ಅವರು ಅನ್ನಾ ಅವರ ಮೊದಲ ಮದುವೆಯ ಮಗಳಾದ ಪೋಲೆನಾ ಅಂಜನಾ ಪವನೋವಾಳನ್ನು ದತ್ತು ಪಡೆದಿದ್ದರು. ವಿಚ್ಛೇದನಕ್ಕೆ ನಿಖರ ಕಾರಣ ಬಹಿರಂಗವಾಗಿಲ್ಲ.




