ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ವಿಶ್ವ

ಸಿಜೆಪಿ: ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ಆರೋಪಿಸಿದ ಗಾಯಕಿ ಮೇರಿ ಮಿಲ್‌ಬೆನ್

ವಾಷಿಂಗ್ಟನ್: ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಅಮೆರಿಕದ ದಾನಿಗಳು ಹಣ ಒದಗಿಸುತ್ತಾರೆ ಎಂದು ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಬುಧವಾರ ಆರೋಪಿಸಿದ್ದಾರೆ. ಅಲ್ಲದೆ ಇದು ಮೌನವಾಗಿರುವ ಸಮಯ ಅಲ್ಲ ಎಂದು ಹೇಳಿರುವ ಅವರ...

ಅಮೆರಿಕದಲ್ಲಿರುವ ಮೋದಿ ವಿರೋಧಿಗಳಿಂದ ಸಿಜೆಪಿಗೆ ಹಣದ ನೆರವು: ಗಾಯಕಿ ಮಿಲ್‌ಬೆನ್
ಹಂಚಿಕೊಳ್ಳಿ:

ಅಮೆರಿಕದ ದಾನಿಗಳು ಕಾಕ್ರೋಚ್ ಜನತಾ ಪಾರ್ಟಿಗೆ ಆರ್ಥಿಕ ನೆರವು ನೀಡುವ ಮೂಲಕ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದ್ದಾರೆ ಎಂದು ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿರೋಧಿಸುವ ಶಕ್ತಿಗಳು ಇಂತಹ ತಂತ್ರಗಳನ್ನು ಬಳಸುತ್ತಿವೆ ಎಂದು ಅವರು ದೂರಿದ್ದಾರೆ. ಈ ವಿಘಟನಕಾರಿ ಮನಸ್ಥಿತಿಯ ವಿರುದ್ಧ ಭಾರತದ ಯುವ ದೇಶಭಕ್ತರು ಶಾಂತಿಯುತವಾಗಿ ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

ಹಂಚಿಕೊಳ್ಳಿ: