ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ: 1,000 ಮಂದಿ ವಶಕ್ಕೆ
ನವದೆಹಲಿ: ಜೀವನ ವೆಚ್ಚ ಏರಿಕೆ ಮತ್ತು ಸಾರ್ವಜನಿಕ ಸೇವೆಗಳಿಗೆ ಅನುದಾನದ ಕೊರತೆಯ ವಿರುದ್ಧ ಫ್ರಾನ್ಸ್‌ನಲ್ಲಿ ನಡೆದ ಬೃಹತ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಈ ಘಟನೆಗಳಲ್ಲಿ ಸುಮಾರು 1,000 ಮಂದ...

ಜೀವನ ವೆಚ್ಚ ಏರಿಕೆ ಮತ್ತು ಸಾರ್ವಜನಿಕ ಸೇವೆಗಳ ಕೊರತೆಯನ್ನು ವಿರೋಧಿಸಿ ಫ್ರಾನ್ಸ್‌ನಾದ್ಯಂತ ನಡೆದ ಬೃಹತ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ದೇಶದ ಪ್ರಮುಖ ನಗರಗಳಲ್ಲಿ ಭದ್ರತಾ ಪಡೆಗಳೊಂದಿಗೆ ಸಂಘರ್ಷ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಗೃಹ ಸಚಿವ ಲಾರೆಂಟ್ ನುನೆಜ್ ಪ್ರಕಾರ ಈವರೆಗೂ ಸುಮಾರು 1,000 ಮಂದಿಯನ್ನು ಬಂಧಿಸಲಾಗಿದೆ. ಲಿಯಾನ್, ಟೌಲೌಸ್ ಮತ್ತು ಪ್ಯಾರಿಸ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ಘರ್ಷಣೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಬಂಧನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.




