Space Toys: ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಆಟಿಕೆ ಸಾಮಾನುಗಳನ್ನು ಒಯ್ಯುವುದು ಯಾಕೆ? ಭಾರೀ ಸೀಕ್ರೆಟ್ ಇದರಲ್ಲಿದೆ!
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಗಗನಯಾತ್ರಿಗಳು ಪಿಕಾಚು ಸೇರಿದಂತೆ ವಿವಿಧ ಆಟಿಕೆಗಳನ್ನು ಒಯ್ಯುವುದರ ಹಿಂದೆ ಒಂದು ಕುತೂಹಲಕಾರಿ ವೈಜ್ಞಾನಿಕ ಕಾರಣವಿದೆ. 1985ರಿಂದ ನಡೆದುಕೊಂಡು ಬಂದಿರುವ ಈ ಅಚ್ಚರಿಯ ಸ...

ಬಾಹ್ಯಾಕಾಶಕ್ಕೆ ಗಗನಯಾತ್ರಿಗಳು ಆಟಿಕೆಗಳನ್ನು ಒಯ್ಯುವುದು ಯಾಕೆ ಗೊತ್ತಾ? Why Astronauts Take Plush Toys Like Pikachu To Space?
ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ತೇಲಾಡುತ್ತಿರುವ ಮುದ್ದಾದ 'ಪಿಕಾಚು' ಆಟಿಕೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಹಂಚಿಕೊಂಡಿದ್ದ ಈ ವಿಡಿಯೋ ಬಾಹ್ಯಾಕಾಶ ಪ್ರೇಮಿಗಳು ಹಾಗೂ 'ಪೋಕ್ಮನ್' ಅಭಿಮಾನಿಗಳನ್ನು ಫುಲ್ ಖುಷಿಪಡಿಸಿತ್ತು. ಆದರೆ, ಇದೊಂದು ಕೇವಲ ವೈರಲ್ ವಿಡಿಯೋ ಮಾತ್ರವಲ್ಲ. ಈ ಹಳದಿ ಬಣ್ಣದ ಪೋಕ್ಮನ್ ಆಟಿಕೆ, ಬಾಹ್ಯಾಕಾಶ ಯಾನದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಒಂದು ವಿಶೇಷ ಸಂಪ್ರದಾಯದ ಭಾಗವಾಗಿದೆ.
ಗಗನಯಾತ್ರಿಗಳ ಆಟಿಕೆಗಳು
ಇತ್ತೀಚೆಗಷ್ಟೇ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಹಲವು ಗಗನಯಾತ್ರಿಗಳು, ತಮ್ಮ ಪ್ರಯಾಣದ ವೇಳೆ ಇಂಥ ಆಟಿಕೆಗಳನ್ನು ಜೊತೆಯಲ್ಲಿ ಕೊಂಡೊಯ್ಯುತ್ತಾರೆ. 1985ರಲ್ಲಿ ಸ್ಪೇಸ್ ಶಟಲ್ ಡಿಸ್ಕವರಿಯ 'STS-51D' ಮಿಷನ್ ಮೂಲಕ ಮೊದಲ ಬಾರಿಗೆ ಆಟಿಕೆಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಾಯಿತು. ಆ ದಿನಗಳಲ್ಲಿ ಗಗನಯಾತ್ರಿಗಳು ಸ್ಲಿಂಕಿ (Slinky), ಯೋ-ಯೋ (Yo-Yo), ಪ್ಯಾಡಲ್ ಬಾಲ್ (paddle ball) ಹಾಗೂ ಒಂದು ಟಾಯ್ ಕಾರ್ ಅನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದರು.
ಆಟಿಕೆಗಳನ್ನೇ ಯಾಕೆ ಒಯ್ಯುತ್ತಾರೆ?
ನೋಡಲು ಇವು ಕೇವಲ ಆಟಿಕೆಗಳಂತೆ ಕಂಡರೂ, ಇವು 'ಜೀರೋ-ಗ್ರಾವಿಟಿ ಇಂಡಿಕೇಟರ್' (ಶೂನ್ಯ ಗುರುತ್ವಾಕರ್ಷಣೆ ಸೂಚಕ) ಗಳಾಗಿ ಕೆಲಸ ಮಾಡುತ್ತವೆ. ನೌಕೆಯು ಭೂಮಿಯ ಗುರುತ್ವಾಕರ್ಷಣೆಯಿಂದ ಹೊರಬಂದು ಶೂನ್ಯ ಗುರುತ್ವಾಕರ್ಷಣೆಯ ಸ್ಥಿತಿಯನ್ನು ತಲುಪಿದೆಯಾ ಎಂಬುದನ್ನು ಇವು ಸೂಚಿಸುತ್ತವೆ. "ಬಾಹ್ಯಾಕಾಶ ನೌಕೆ ಹಾಗೂ ಅದರೊಳಗಿರುವ ಯಾತ್ರಿಕರು ಭೂಮಿಯ ಗುರುತ್ವಾಕರ್ಷಣೆಯಿಂದ ಹೊರಬಂದು, ತೂಕರಹಿತ ಸ್ಥಿತಿಯನ್ನು ತಲುಪಿದ್ದಾರೆಯೇ ಎಂಬುದನ್ನು ವಿಡಿಯೋ ಮೂಲಕ ಸುಲಭವಾಗಿ ಗುರುತಿಸಲು ಈ ಸಣ್ಣ ಪ್ಲಶ್ (ಮೃದುವಾದ) ಆಟಿಕೆಗಳು ಸಹಾಯ ಮಾಡುತ್ತವೆ" ಎಂದು ನಾಸಾ ವಿವರಿಸಿದೆ. ನೌಕೆಯೊಳಗೆ ಈ ಆಟಿಕೆಗಳು ತೇಲಲು ಶುರುಮಾಡಿದ ತಕ್ಷಣ, ತಾವು ಬಾಹ್ಯಾಕಾಶವನ್ನು ತಲುಪಿದ್ದೇವೆ ಎಂದು ಗಗನಯಾತ್ರಿಗಳು ಖಚಿತಪಡಿಸಿಕೊಳ್ಳುತ್ತಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ವೀಕ್ಷಿಸಿ
ESA - ಯುರೋಪಿಯನ್ ಸ್ಪೇಸ್ ಏಜೆನ್ಸಿ (@europeanspaceagency) ಹಂಚಿಕೊಂಡ ಪೋಸ್ಟ್
5 ಪ್ರಸಿದ್ಧ ಪ್ಲಶ್ ಆಟಿಕೆಗಳು
1. ಇಎಸ್‌ಎ (ESA) ಕಳುಹಿಸಿದ 'ಪಿಕಾಚು'
2026ರ ಅಕ್ಟೋಬರ್ 4 ರಿಂದ 10ರವರೆಗೆ ನಡೆದ 'ವರ್ಲ್ಡ್ ಸ್ಪೇಸ್ ವೀಕ್' ಆಚರಣೆಯ ಭಾಗವಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಹಾಗೂ ದ ಪೋಕ್ಮನ್ ಕಂಪನಿ ಇಂಟರ್ನ್ಯಾಷನಲ್ ಜಂಟಿಯಾಗಿ ಪಿಕಾಚುವನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದವು. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿ ಸೋಫಿ ಅಡೆನೋಟ್ ಅವರ ಮಿಷನ್‌ನ ಭಾಗವಾಗಿದ್ದ ಈ ಆಟಿಕೆ, ಏಪ್ರಿಲ್ 11 ರಿಂದ ಜೂನ್ 17ರವರೆಗೆ ಬರೋಬ್ಬರಿ 67 ದಿನಗಳ ಕಾಲ ಕಕ್ಷೆಯಲ್ಲಿತ್ತು.
Video source: Axiom Space/ YouTube
2. ಶುಭಾಂಶು ಶುಕ್ಲಾ ಅವರ 'ಜಾಯ್'
2025ರ ತಮ್ಮ ಮಿಷನ್ ವೇಳೆ, ಬಾಹ್ಯಾಕಾಶದಿಂದ ನಡೆಸಿದ ಲೈವ್ ವೆಬ್‌ಕಾಸ್ಟ್‌ನಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ 'ಜಾಯ್' ಎಂಬ ಆಟಿಕೆಯನ್ನು ಜಗತ್ತಿಗೆ ಪರಿಚಯಿಸಿದರು. ಇದು ಹಂಸದ ಆಕಾರದ ಮುದ್ದಾದ ಆಟಿಕೆಯಾಗಿತ್ತು.
3. 'ಸ್ನೂಪಿ'ಯ ಪಯಣ
'ಪೀನಟ್ಸ್' ಕಾಮಿಕ್ ಸರಣಿಯ ಜನಪ್ರಿಯ ಪಾತ್ರವಾದ ಸ್ನೂಪಿಗೆ ಬಾಹ್ಯಾಕಾಶ ಯಾನದಲ್ಲಿ ದೊಡ್ಡ ಇತಿಹಾಸವೇ ಇದೆ. 2019ರಲ್ಲಿ ಸ್ನೂಪಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತ್ತು.
4. 'ಬೇಬಿ ಯೋಡಾ' ಟ್ರಿಪ್
2020ರಲ್ಲಿ ಅಮೆರಿಕ ಹಾಗೂ ಜಪಾನ್‌ನ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದಾಗ, ತಮ್ಮ ಜೊತೆ 'ಬೇಬಿ ಯೋಡಾ' ಪ್ಲಶ್ ಆಟಿಕೆಯನ್ನು ಕೊಂಡೊಯ್ದಿದ್ದರು. ಮಿಷನ್‌ನ ಲೈವ್ ಸ್ಟ್ರೀಮ್‌ಗಳಲ್ಲಿ ಬೇಬಿ ಯೋಡಾ ಸೀಟಿನಲ್ಲಿ ಕೂರಲು ಪ್ರಯತ್ನಿಸುತ್ತಿದ್ದ ತಮಾಷೆಯ ದೃಶ್ಯಗಳು ವೀಕ್ಷಕರ ಗಮನ ಸೆಳೆದಿದ್ದವು.
5. 'ಓಲಾಫ್' ಎಂಬ ಲಕ್ಕಿ ಚಾರ್ಮ್
2014ರಲ್ಲಿ ನಡೆದ 'Soyuz TMA-15M' ಮಿಷನ್ ಮೂಲಕ ಓಲಾಫ್ ಬಾಹ್ಯಾಕಾಶವನ್ನು ತಲುಪಿತ್ತು. ರಷ್ಯಾದ ಗಗನಯಾತ್ರಿ ಆಂಟನ್ ಶ್ಕಾಪ್ಲೆರೊವ್, ತಮ್ಮ 8 ವರ್ಷದ ಮಗಳ ಲಕ್ಕಿ ಚಾರ್ಮ್ (ಅದೃಷ್ಟದ ಸಂಕೇತ) ಆಗಿ ಈ ಆಟಿಕೆಯನ್ನು ತಮ್ಮ ಜೊತೆ ಕೊಂಡೊಯ್ದಿದ್ದರು.




