ಗುಡ್‌ನ್ಯೂಸ್ ಇಲ್ವಾ ಮೇಡಮ್? ಎಂದ ಅಭಿಮಾನಿಗೆ ಆಂಕರ್ ಅನುಶ್ರೀ ಕೊಟ್ಟ ಉತ್ತರವೇನು?
ಬಹಳ ದಿನಗಳ ನಂತರ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದ ನಿರೂಪಕಿ ಅನುಶ್ರೀ, ಅಭಿಮಾನಿಯೊಬ್ಬರು ಕೇಳಿದ 'ಗುಡ್‌ನ್ಯೂಸ್' ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ್ದಾರೆ. ಇದೇ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಸಂತಸ ಹಂಚಿಕೊಂಡ ಅವ...

ಕನ್ನಡದ ಪ್ರಖ್ಯಾತ ನಿರೂಪಕಿ ಅನುಶ್ರೀ ಬಹಳ ದಿನಗಳ ನಂತರ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದಿದ್ದರು. ಆರಂಭದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಸ್ತುತ ಗೋಲ್ಡನ್ ಸ್ಟಾರ್ ಅಭಿನಯದ ಮುಂಬರುವ ಚಿತ್ರ ಬೃಂದಾವಿಹಾರಿಯ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಪ್ರಯಾಣ ಮಾಡಲಿರುವ ಅನುಶ್ರೀ ಅವರು, ಅಭಿಮಾನಿಗಳನ್ನು ಅಲ್ಲಿಯೇ ಭೇಟಿಯಾಗೋಣ ಎಂದಿದ್ದಾರೆ. ಲೈವ್ ಹಂತದಲ್ಲಿ ಅಭಿಮಾನಿ ಅನಿಲ್ ಕುಮಾರ್ ಎನ್ನುವವರು ಮೇಡಮ್ ಏನೂ ಗುಡ್‌ನ್ಯೂಸ್ ಇಲ್ವಾ? ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅಷ್ಟೇ ಕೂಲ್ ಆಗಿ ಉತ್ತರಿಸಿದ ಅನುಶ್ರೀ, 'ಜೀ ಕನ್ನಡಕ್ಕೆ ಗೊತ್ತಿಲ್ಲದೆ ನಾನು ಯಾವ ಗುಡ್‌ನ್ಯೂಸ್ ಹೇಳಿಬಿಡ್ತಿನಿ ಅನಿಲ್ ಅವರೇ? ಬಹುಶಃ ನನ್ನ ಗಂಡನಿಗಿಂತ ಮೊದಲು ಅಥವಾ ಕುಟುಂಬಕ್ಕಿಂತ ಮೊದಲು ಜೀ ಗೊತ್ತಾಗುತ್ತೆ ಅನಿಸುತ್ತೆ' ಎಂದು ಹೇಳಿದ್ದಾರೆ.ಮದುವೆಯಾದ ಬಳಿಕ ಜೀವನ ಚೆನ್ನಾಗಿದೆ. ಸರಳವಾಗಿ ಹೋಗುತ್ತಿದೆ. ಮುಂದೆಯೂ ನನ್ನ ಜೀವನ ಹೀಗೆಯೇ ಇರಲಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಅನುಶ್ರೀ ಹೇಳಿದ್ದಾರೆ.
ವಾರಕ್ಕೊಮ್ಮೆ ಲೈವ್‌ನಲ್ಲಿ ಸಿಗುತ್ತೇನೆ
ನಾನು ಮೊದಲು ತುಂಬಾ ಇನ್ಸ್‌ಟಾಗ್ರಾಮ್ ಲೈವ್ ಮಾಡುತ್ತಿದ್ದೆ. ಆದರೆ, ಏನು ಕಾರಣವೋ ಗೊತ್ತಿಲ್ಲ ಇತ್ತೀಚಿನ ವರ್ಷಗಳಲ್ಲಿ ಲೈವ್ ತುಂಬಾ ಕಡಿಮೆ ಮಾಡಿದ್ದೆ. ಇನ್ನು ಮುಂದೆ ಹಾಗಾಗೋದಿಲ್ಲ. ಕನಿಷ್ಠ ವಾರಕ್ಕೆ ಒಮ್ಮೆಯಾದರೂ ನಾನು ಲೈವ್ ಮಾಡಿ ನಿಮ್ಮೊಂದಿಗೆ ಮಾತನಾಡುತ್ತೇನೆ. ಇಲ್ಲದೇ ಇದ್ದಲ್ಲಿ 10 ದಿನಕ್ಕೆ ಒಮ್ಮೆಯಾದರೂ ಖಂಡಿತವಾಗಿ ಲೈವ್ ಮಾಡಿ ನಿಮ್ಮೊಂದಿಗೆ ಕನೆಕ್ಟ್‌ನಲ್ಲಿ ಇರುತ್ತೇನೆ ಎಂದು ಅನುಶ್ರೀ ಹೇಳಿದ್ದಾರೆ.
ಮನೆ ಯಜಮಾನಿಗೆ ಮರ್ಯಾದೆಯೇ ಕೊಡೋದಿಲ್ಲ ನಾಯಿಗಳು
ಇದೇ ವೇಳೆ ತಮ್ಮ ಅಭಿಮಾನಿಗಳಿಗೆ ಮನೆಯ ಎರಡು ಮುದ್ದಿನ ನಾಯಿಗಳನ್ನು ಅನುಶ್ರೀ ಪರಿಚಯಿಸಿದ್ದಾರೆ. ಅನುಶ್ರೀ ಅವರು ಎಷ್ಟೇ ಕರೆದರೂ ನಾಯಿಗಳು ಮಾತ್ರ ತಾವು ಇದ್ದ ಜಾಗ ಕದಲಿರಲಿಲ್ಲ. ಇದನ್ನೇ ತಮಾಷೆಯಾಗಿ ಹೇಳಿದ ಅನುಶ್ರೀ, ಈ ಮನೆಯ ಯಜಮಾನಿ ನಾನಾ? ಅವರಾ? ಅನ್ನೋದೇ ಗೊತ್ತಾಗ್ತಿಲ್ಲ. ಆವಾಗಲಿಂದ ಅವುಗಳನ್ನು ಕರೆಯುತ್ತಿದ್ದರೂ ಬರುತ್ತಿಲ್ಲ ಎಂದು ಹೇಳಿದ್ದಲ್ಲದೆ, ಅವುಗಳನ್ನು ತಮ್ಮ ಬಳಿ ಕರೆಯುವ ಉಪಾಯವೂ ಇದೆ ಎನ್ನುತ್ತಾ ಕೈಯಲ್ಲಿ ಬಿಸ್ಕೇಟ್ ಹಿಡಿದು ಕರೆದಿದ್ದಾರೆ. ಈ ವೇಳೆ ಎರಡೂ ನಾಯಿಗಳು ಅವರ ಬಳಿ ಬಂದಿವೆ. ಕೊನೆಗೆ ಅವುಗಳನ್ನು ಅನುಶ್ರೀ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಮದುವೆ
ಬಹಳ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋ ವಿಚಾರ ಕಿರುತೆರೆಗಳಲ್ಲಿ ಚರ್ಚೆಯಾಗುತ್ತಿತ್ತು. ಕೊನೆಗೂ ಈ ವಿಚಾರಕ್ಕೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂತಿಮ ಮುದ್ರೆ ಒತ್ತಿದ್ದರು. 2025ರ ಆಗಸ್ಟ್ 28 ರಂದು ಉದ್ಯಮಿ ರೋಶನ್‌ರನ್ನು ಅನುಶ್ರೀ ವಿವಾಹವಾಗಿದ್ದರು. ಇತ್ತೀಚೆಗೆ ಮದುವೆಯ ವಾರ್ಷಿಕೋತ್ಸವದ ಸಲುವಾಗಿ ಕೀನ್ಯಾದ ಮಸಾಯಿ ಮಾರಾಕ್ಕೆ ಪ್ರವಾಸಕ್ಕೆ ಹೋಗಿ ಬಂದಿದ್ದರು.
A post shared by ಅನುಶ್ರೀ Anchor APPU FAN (@anchor_anushreeofficial)




