ಹಾವುಗಳು ಹುತ್ತದೊಳಗೆ ಸೇರಿದ ಮೇಲೆ ಏನು ಮಾಡುತ್ತವೆ ಗೊತ್ತಾ? ಇಲ್ಲಿದೆ ರೋಚಕ ಮಾಹಿತಿ!
ಸದಾ ಬಿಲ ಅಥವಾ ಹುತ್ತ ಸೇರಿಕೊಳ್ಳುವ ಹಾವುಗಳು ಅಲ್ಲಿ ದಿನವಿಡೀ ಏನು ಮಾಡುತ್ತವೆ ಎಂಬ ಕುತೂಹಲ ನಿಮಗಿದೆಯೇ? ಅವುಗಳ ನಿದ್ರೆ, ಆಹಾರ ಜೀರ್ಣಕ್ರಿಯೆ ಹಾಗೂ ಪೊರೆ ಕಳಚುವ ಪ್ರಕ್ರಿಯೆಯ ರೋಚಕ ರಹಸ್ಯಗಳ ಇಂಟರೆಸ್ಟಿಂಗ್ ಸತ್ಯ ಇಲ...

ಸದಾ ಬಿಲ ಅಥವಾ ಹುತ್ತ ಸೇರಿಕೊಳ್ಳುವ ಹಾವುಗಳು ಅಲ್ಲಿ ದಿನವಿಡೀ ಏನು ಮಾಡುತ್ತವೆ ಎಂಬ ಕುತೂಹಲ ನಿಮಗಿದೆಯೇ? ಇಲ್ಲಿದೆ ಇಂಟರೆಸ್ಟಿಂಗ್ ಸತ್ಯ!
ಸ್ವತಃ ಹುತ್ತ ಕಟ್ಟುವುದಿಲ್ಲ!
ಮೊದಲನೆಯದಾಗಿ ಹಾವುಗಳು ಎಂದಿಗೂ ತಾವಾಗಿಯೇ ಹುತ್ತ ಅಥವಾ ಬಿಲ ತೋಡುವುದಿಲ್ಲ. ಇಲಿಗಳು ತೋಡಿದ ಬಿಲಗಳು ಅಥವಾ ಗೆದ್ದಲು ಕಟ್ಟಿದ ಹುತ್ತಗಳನ್ನು ಹಾವುಗಳು ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ.
ತಿಂದ ಆಹಾರ ಜೀರ್ಣವಾಗಲು ದಿನಗಟ್ಟಲೆ ವಿಶ್ರಾಂತಿ!
ಹಾವುಗಳು ಬೇಟೆಯನ್ನು ಜಗಿಯದೆ ಇಡೀ ನುಂಗುತ್ತವೆ. ದೊಡ್ಡ ಪ್ರಾಣಿಗಳನ್ನು ನುಂಗಿದ ನಂತರ ಅದನ್ನು ಜೀರ್ಣಿಸಿಕೊಳ್ಳಲು ಯಾವುದೇ ಅಡೆತಡೆ ಇಲ್ಲದ ಸುರಕ್ಷಿತ ಸ್ಥಳ ಬೇಕು. ಅದಕ್ಕಾಗಿ ಬಿಲದೊಳಗೆ ಕದಲದೆ ದಿನಗಟ್ಟಲೆ ಮಲಗುತ್ತವೆ.
ಹಳೆಯ ಚರ್ಮ ಕಳಚಲು ಏಕಾಂತ ಬೇಕು!
ಹಾವುಗಳು ತಮ್ಮ ಮೈಮೇಲಿನ ಪೊರೆಯನ್ನು (Skin shedding) ಬಿಡುವ ಸಮಯದಲ್ಲಿ ಕಣ್ಣು ಮಸುಕಾಗುತ್ತದೆ ಮತ್ತು ಅವು ದುರ್ಬಲವಾಗಿರುತ್ತವೆ. ಹೀಗಾಗಿ ಶತ್ರುಗಳ ಕಣ್ಣಿಗೆ ಬೀಳದಂತೆ ಬಿಲದ ಕತ್ತಲೆಯಲ್ಲೇ ಪೊರೆ ಕಳಚುತ್ತವೆ.
ಶೀತ ರಕ್ತದ ಪ್ರಾಣಿಗಳಿಗೆ ಬಿಲವೇ ರಕ್ಷಣೆ!
ಹಾವುಗಳಿಗೆ ಮನುಷ್ಯರಂತೆ ದೇಹದ ಉಷ್ಣತೆಯನ್ನು ತಾವೇ ನಿಯಂತ್ರಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ತೀವ್ರ ಬಿಸಿಲು ಅಥವಾ ಮೈಕೊರೆಯುವ ಚಳಿಯಿಂದ ಬಚಾವಾಗಲು ಅವು ಭೂಮಿಯ ಆಳದ ತಂಪಾದ ಬಿಲದಲ್ಲಿ ಆಶ್ರಯ ಪಡೆಯುತ್ತವೆ.
ಪರಭಕ್ಷಕಗಳಿಂದ ರಕ್ಷಣೆ!
ಹದ್ದು, ಗಿಡುಗ, ಮುಂಗುಸಿ ಹಾಗೂ ನವಿಲುಗಳಂತಹ ಶತ್ರು ಪ್ರಾಣಿ-ಪಕ್ಷಿಗಳಿಂದ ತಪ್ಪಿಸಿಕೊಳ್ಳಲು ಬಿಲಗಳು ಹಾವುಗಳಿಗೆ ಅತ್ಯಂತ ಸುರಕ್ಷಿತ ಬಂಕರ್‌ಗಳಿದ್ದಂತೆ.
ಮೊಟ್ಟೆ ಇಡುವುದು & ಸಂತಾನೋತ್ಪತ್ತಿ
ಹೆಣ್ಣು ಹಾವುಗಳು ಮೊಟ್ಟೆ ಇಡಲು ತೇವಾಂಶ ಮತ್ತು ಸುರಕ್ಷತೆ ಇರುವ ಬಿಲಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಮೊಟ್ಟೆಗಳಿಗೆ ಬೇರೆ ಪ್ರಾಣಿಗಳಿಂದ ಹಾನಿಯಾಗದಂತೆ ಇಡಲು ಬಿಲಗಳು ನೆರವಾಗುತ್ತವೆ.
ಚಳಿಗಾಲದಲ್ಲಿ ಗಾಢ ನಿದ್ರೆ!
ಅತಿಯಾದ ಚಳಿಗಾಲದ ದಿನಗಳಲ್ಲಿ ಹಾವುಗಳು ‘ಹೈಬರ್ನೇಶನ್’ (Hibernation) ಸ್ಥಿತಿಗೆ ಜಾರುತ್ತವೆ. ಈ ಸಮಯದಲ್ಲಿ ತಿಂಗಳುಗಟ್ಟಲೆ ಬಿಲದಿಂದ ಹೊರಬಾರದೆ ಸುಮ್ಮನೆ ಮಲಗಿರುತ್ತವೆ.




