ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ತಂತ್ರಜ್ಞಾನ

ದ ಲ್ಯಾನ್ಸೆಟ್ ಎಚ್ಚರಿಕೆ: 2100ರ ವೇಳೆಗೆ ಅಣು ಸಮರ ಮತ್ತು AI ದುರ್ಬಳಕೆಯಿಂದ ಮಾನವಕುಲ ವಿನಾಶ!

ಕೃತಕ ಬುದ್ಧಿಮತ್ತೆಯ ದುರ್ಬಳಕೆ ಮತ್ತು ಅಣು ಯುದ್ಧಗಳಿಂದ 2100ರ ವೇಳೆಗೆ ಮಾನವ ಜನಾಂಗವೇ ನಿರ್ನಾಮವಾಗುವ ಅಪಾಯವಿದೆ ಎಂದು 'ದ ಲ್ಯಾನ್ಸೆಟ್' ವರದಿ ಎಚ್ಚರಿಸಿದೆ. ಮುಂದಿನ 75 ವರ್ಷಗಳಲ್ಲಿ ಮಾನವನ ಅಸ್ತಿತ್ವಕ್ಕೆ ಧಕ್ಕೆ ತ...

· ಬೆಂಗಳೂರು ನಗರ
2100ರ ವೇಳೆಗೆ ಭೂಮಿಯ ಮೇಲೆ ಮಾನವಕುಲ ವಿನಾಶ ಖಂಡಿತ: ಪರಮಾಣು ಯುದ್ಧ, AI ದುರ್ಬಳಕೆ ಕುರಿತು ಲ್ಯಾನ್ಸೆಟ್ ಎಚ್ಚರಿಕೆ
ಹಂಚಿಕೊಳ್ಳಿ:

ಬೆಂಗಳೂರು (ಅ.12): ಕೃತಕ ಬುದ್ಧಿಮತ್ತೆಯ (AI) ಅಪಾಯಕಾರಿ ದುರ್ಬಳಕೆ ಹಾಗೂ ಭೀಕರ ಅಣು ಯುದ್ಧಗಳ (Nuclear Conflict) ಕಾರಣದಿಂದ 2100 ರ ಹೊತ್ತಿಗೆ ಭೂಮಿಯ ಮೇಲಿನ ಮಾನವ ಕುಲವೇ ಸಂಪೂರ್ಣವಾಗಿ ಅಳಿಸಿಹೋಗುವ (Human Extinction) ಭೀತಿಯನ್ನು ವ್ಯಕ್ತಪಡಿಸಲಾಗಿದೆ. ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆ 'ದ ಲ್ಯಾನ್ಸೆಟ್' (The Lancet) ಪ್ರಕಟಿಸಿರುವ ಜಾಗತಿಕ ಅಪಾಯಗಳ ಕುರಿತಾದ ಸಮಗ್ರ ಮೌಲ್ಯಮಾಪನ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಮುಂದಿನ 75 ವರ್ಷಗಳಲ್ಲಿ ಮಾನವನ ಆರೋಗ್ಯ, ಜಾಗತಿಕ ಸ್ಥಿರತೆ ಮತ್ತು ಅಸ್ತಿತ್ವಕ್ಕೆ ಮಾರಕವಾಗಬಲ್ಲ 17 ಪ್ರಮುಖ ಸಂಕಟಗಳನ್ನು ಲ್ಯಾನ್ಸೆಟ್ ಕಮಿಷನ್ ಗುರುತಿಸಿದ್ದು, ಈ ಪೈಕಿ ಅಣು ಸಮರ ಹಾಗೂ ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದೆ.

ಅಣು ಸಮರ ಮತ್ತು ಎಐ ಜೈವಿಕ ಅಸ್ತ್ರಗಳ 'ಅಪೋಕಲಿಪ್ಸ್'

ವರದಿಯ ಪ್ರಕಾರ, "ಎಐ ದುರ್ಬಳಕೆಯಿಂದ ಸೃಷ್ಟಿಯಾಗುವ ಜೈವಿಕ ಅಸ್ತ್ರಗಳು (Bioweapons) ಮತ್ತು ಭಾರಿ ಅಣು ಸಮರಗಳಿಂದ ಉಂಟಾಗುವ 'ಅಣು ಕ್ಷಾಮ'ವು (Nuclear Famine) ಮುಂದಿನ 75 ವರ್ಷಗಳಲ್ಲಿ ಮಾನವಕುಲವನ್ನು ನಿರ್ನಾಮ ಮಾಡುವ ಸಾಮರ್ಥ್ಯವನ್ನು ಹೊಂದಿವೆ" ಎಂದು ತಿಳಿಸಲಾಗಿದೆ.

ಒಂದು ವೇಳೆ ಅಣು ಯುದ್ಧ ಸಂಭವಿಸಿದರೆ, ವಾತಾವರಣದ ಮೇಲ್ಭಾಗಕ್ಕೆ ಹೆಚ್ಚಿನ ಪ್ರಮಾಣದ ವಿಷಕಾರಿ ಧೂಳು ಸೇರಿ ಸೂರ್ಯನ ಬೆಳಕು ಭೂಮಿಯನ್ನು ತಲುಪದಂತಾಗಿ, ಜಾಗತಿಕವಾಗಿ ಸಸ್ಯವರ್ಗ ನಾಶವಾಗಿ ಭೀಕರ ಕ್ಷಾಮ ಕಾಣಿಸಿಕೊಳ್ಳಲಿದೆ. ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಕಡಿಮೆ ಇದ್ದರೂ, ಒಮ್ಮೆ ನಡೆದರೆ ಉಂಟಾಗುವ ಹಾನಿಯು 'ಸಂಪೂರ್ಣ ಮಾನವಕುಲಕ್ಕೆ ಮಹಾ ವಿನಾಶ' (Apocalypse) ತಂದೊಡ್ಡಲಿದೆ ಎಂದು ಲ್ಯಾನ್ಸೆಟ್‌ನ ಸಂಪಾದಕೀಯ ಎಚ್ಚರಿಸಿದೆ.

17 ಪ್ರಮುಖ ಮಹಾ ಸಂಕಟಗಳು ಹಾಗೂ DALYs ಲೆಕ್ಕಾಚಾರ

ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ, ರೋಗ, ಅಂಗವೈಕಲ್ಯ ಅಥವಾ ಅಕಾಲಿಕ ಮರಣದಿಂದ ನಷ್ಟವಾಗುವ 'ಆರೋಗ್ಯಕರ ಮಾನವ ಜೀವಿತಾವಧಿ'ಯನ್ನು ಅಳೆಯುವ 'ಡಾಲಿ' (DALYs - Disability-Adjusted Life Years) ಮಾದರಿಯನ್ನು ಬಳಸಿ ಕಮಿಷನ್ 17 ಅಪಾಯಗಳನ್ನು ಪಟ್ಟಿ ಮಾಡಿದೆ. 1 ಶತಕೋಟಿಗಿಂತಲೂ ಹೆಚ್ಚು ಡಾಲಿ (DALYs) ನಷ್ಟಕ್ಕೆ ಕಾರಣವಾಗಬಲ್ಲ ಪ್ರಮುಖ ಜಾಗತಿಕ ಅಪಾಯಗಳ ವಿವರ ಹೀಗಿದೆ:

ಕೃತಕ ಬುದ್ಧಿಮತ್ತೆಯ (AI) ಅತ್ಯಂತ ಅಪಾಯಕಾರಿ ದುರ್ಬಳಕೆ ಅಣು ಸಮರ ಮತ್ತು ತತ್ಪರಿಣಾಮದ ಕ್ಷಾಮ ತೀವ್ರ ಜಾಗತಿಕ ವಾಯು ಮಾಲಿನ್ಯ (Air Pollution) ಆಂಟಿಮೈಕ್ರೋಬಿಯಲ್ ನಿರೋಧಕತೆ (AMR - ಔಷಧಿಗಳು ಕೆಲಸ ಮಾಡದಿರುವುದು) ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ (Childhood Malnutrition) ಹವಾಮಾನ ವೈಪರೀತ್ಯ ಮತ್ತು ಮುರಿದುಬೀಳುತ್ತಿರುವ ಪರಿಸರ ವ್ಯವಸ್ಥೆ (Climate Breakdown) ಸಾಂಪ್ರದಾಯಿಕ ಯುದ್ಧಗಳು ಹಾಗೂ ಸಶಸ್ತ್ರ ಸಂಘರ್ಷಗಳು ಬಡ ದೇಶಗಳಿಗೆ ಶ್ರೀಮಂತ ರಾಷ್ಟ್ರಗಳು ನೀಡುವ ವಿದೇಶಿ ನೆರವು ಕಡಿತ ಅತಿಯಾದ ಮದ್ಯಪಾನ ಹಾಗೂ ಧೂಮಪಾನ ರಕ್ತದೊತ್ತಡ (High Blood Pressure), ಬೊಜ್ಜು (Obesity) ಹಾಗೂ ಕಳಪೆ ಮಾನಸಿಕ ಆರೋಗ್ಯ ಆದಾಯ ಅಸಮಾನತೆ ಹಾಗೂ ಕಡಿಮೆ ಶಿಕ್ಷಣ ಮಟ್ಟ ನೈಸರ್ಗಿಕವಾಗಿ ಉದ್ಭವಿಸುವ ಮಾರಕ ಸಾಂಕ್ರಾಮಿಕ ರೋಗಗಳು (Pandemics)ಬಡ ರಾಷ್ಟ್ರಗಳಿಗೆ ವೈದ್ಯಕೀಯ ನೆರವು ಕಡಿತದ ಭಾರಿ ಪರಿಣಾಮ

ಅಮೆರಿಕ (US) ಹಾಗೂ ಬ್ರಿಟನ್ (UK) ಸೇರಿದಂತೆ ಪ್ರಮುಖ ಶ್ರೀಮಂತ ರಾಷ್ಟ್ರಗಳು ಕಳೆದ ವರ್ಷದಲ್ಲಿ ಬಡ ದೇಶಗಳಿಗೆ ನೀಡುತ್ತಿದ್ದ ಜಾಗತಿಕ ಆರೋಗ್ಯ ನೆರವನ್ನು ಗಣನೀಯವಾಗಿ ಕಡಿತಗೊಳಿಸಿವೆ. ಈ ಅಂತರರಾಷ್ಟ್ರೀಯ ವೈದ್ಯಕೀಯ ನೆರವು ಕಡಿತದ ಪರಿಣಾಮವಾಗಿ 2100 ರ ವೇಳೆಗೆ 1.5 ಶತಕೋಟಿ ವರ್ಷಗಳ ಆರೋಗ್ಯಕರ ಜೀವನ ನಷ್ಟವಾಗಲಿದ್ದು, ಇದರಲ್ಲಿ ಶೇಕಡಾ 70 ರಷ್ಟು ಭಾರಿ ಹೊಡೆತ ಆಫ್ರಿಕಾದ ಉಪ-ಸಹಾರನ್ ಪ್ರದೇಶಕ್ಕೆ ತಟ್ಟಲಿದೆ.

ಪರಿಹಾರವಿಲ್ಲದ ಸಮಸ್ಯೆಯಲ್ಲ, ತಕ್ಷಣದ ಕ್ರಮ ಅಗತ್ಯ

ಯುನಿವರ್ಸಿಟಿ ಕಾಲೇಜ್ ಲಂಡನ್‌ನ (UCL) ಪ್ರೊಫೆಸರ್ ಇಬ್ರಾಹಿಂ ಅಬುಬಕರ್ ಮಾತನಾಡಿ, "ಜನರಲ್ಲಿ ಭಯ ಹುಟ್ಟಿಸುವುದು ನಮ್ಮ ಉದ್ದೇಶವಲ್ಲ. ಈ 17 ಅಪಾಯಗಳಿಗೂ ಪರಿಣಾಮಕಾರಿ 'ನೈಜ ಪರಿಹಾರ ಮಾರ್ಗಗಳು' (Realistic route to act) ಇವೆ. ವಿಶ್ವದ ನಾಯಕರು ಹಾಗೂ ನೀತಿ ನಿರೂಪಕರು ತಕ್ಷಣವೇ ಸೂಕ್ತ ಕ್ರಮ ಕೈಗೊಂಡರೆ ಈ ಮಹಾ ಆಪತ್ತನ್ನು ತಪ್ಪಿಸಬಹುದು" ಎಂದು ಹೇಳಿದ್ದಾರೆ. ಹವಾಮಾನ ವೈಪರೀತ್ಯದ ತಾಪಮಾನ ಏರಿಕೆಯನ್ನು 4.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲು ಬಿಡದೆ, 1.8 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಿದರೆ 1.89 ಶತಕೋಟಿ ವರ್ಷಗಳ ಆರೋಗ್ಯಕರ ಜೀವಿತಾವಧಿಯನ್ನು ಉಳಿಸಿಕೊಳ್ಳಬಹುದು ಎಂದು ವರದಿ ತಿಳಿಸಿದೆ.

ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್ (IHME) ನಿರ್ದೇಶಕ ಹಾಗೂ ಕಮಿಷನ್ ಸಹ-ಅಧ್ಯಕ್ಷ ಪ್ರೊ. ಕ್ರಿಸ್ಟೋಫರ್ ಮುರ್ರೆ ಮಾತನಾಡಿ, ಬರ್ಲಿನ್‌ನಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ (World Health Summit) 35 ಜಾಗತಿಕ ತಜ್ಞರನ್ನೊಳಗೊಂಡ ಈ ವರದಿಯನ್ನು ಮಂಡಿಸಲಾಗುತ್ತಿದ್ದು, ಪ್ರತಿವರ್ಷ ಹೊಸ ದತ್ತಾಂಶಗಳೊಂದಿಗೆ ಈ ಅಪಾಯಗಳನ್ನು ಮರುಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಿ: