ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕ್ರೀಡೆ

ಮುಂಬೈನಲ್ಲಿ ಕೃಷ್ಣ ದಾಸ್ ಕೀರ್ತನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿರಾಟ್-ಅನುಷ್ಕಾ

ಮುಂಬೈನಲ್ಲಿ ಭಾನುವಾರ ನಡೆದ ಅಮೆರಿಕದ ಪ್ರಸಿದ್ಧ ಗಾಯಕ ಕೃಷ್ಣ ದಾಸ್ ಅವರ ಲೈವ್ ಕೀರ್ತನ ಕಾರ್ಯಕ್ರಮದಲ್ಲಿ ತಾರಾ ದಂಪತಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಲ್ಗೊಂಡಿದ್ದರು. ಈ ದಂಪತಿ ಭಕ್ತಿ ಗೀತೆಗಳ ಸಂಗೀತವ...

ವಿಶ್ವ ಪ್ರಸಿದ್ಧ ಗಾಯಕ ಕೃಷ್ಣ ದಾಸ್ ಕೀರ್ತನೆಗೆ ತಲೆದೂಗಿದ ವಿರುಷ್ಕಾ ದಂಪತಿ! Video ವೈರಲ್
ಹಂಚಿಕೊಳ್ಳಿ:

ಅಮೆರಿಕದ ಖ್ಯಾತ ಗಾಯಕ ಕೃಷ್ಣ ದಾಸ್ ಅವರು ಮುಂಬೈನಲ್ಲಿ ಹಮ್ಮಿಕೊಂಡಿದ್ದ ಲೈವ್ ಕೀರ್ತನ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಭಾಗವಹಿಸಿದ್ದರು. ಈ ವೇಳೆ ಭಕ್ತಿ ಸಂಗೀತದಲ್ಲಿ ಸಂಪೂರ್ಣವಾಗಿ ಮಗ್ನರಾದ ದಂಪತಿಗಳು, ಲಯಬದ್ಧವಾಗಿ ತಲೆದೂಗುತ್ತಾ ಸಂಗೀತವನ್ನು ಆಸ್ವಾದಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೃಷ್ಣ ದಾಸ್ ಅವರ ಭಾರತ ಪ್ರವಾಸದ ಭಾಗವಾಗಿ ನಡೆದ ಈ ಸಂಗೀತ ಸಂಜೆಯಲ್ಲಿ ತಾರಾ ದಂಪತಿಗಳು ಭಕ್ತಿಯಿಂದ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿರಾಟ್ ಮತ್ತು ಅನುಷ್ಕಾ ಈ ಹಿಂದೆ 2016ರಲ್ಲಿಯೂ ಲಂಡನ್‌ನಲ್ಲಿ ಇವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಹಂಚಿಕೊಳ್ಳಿ: