ಮುಂಬೈ: ತಾಯಿಯ ಕೈ ಅಡುಗೆಯ ಸವಿನೆನಪು ಹಂಚಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ತಮ್ಮ ನೆಚ್ಚಿನ ಮಹಾರಾಷ್ಟ್ರ ಮನೆ ಅಡುಗೆ ಹಾಗೂ ತಾಯಿಯ ಕೈ ರುಚಿಯ ಬಗೆಗಿನ ವೀಡಿಯೊ ಹಂಚಿಕೊಂಡಿದ್ದಾರೆ. ಸಚಿನ್‌ಗೆ ಇಷ್ಟವಾದ ಪುಡ್ ಹಾಗೂ ವಿಡಿಯೋ ಹಂಚಿಕೊಂಡು ಸಚಿನ ಹೇಳಿದ್ದೇನು? ಈ ಕುರಿತ ಪೂರ್ಣ ವಿ...

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ತಾಯಿಯ ಕೈ ಅಡುಗೆಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ವಿದೇಶಿ ಪ್ರವಾಸಗಳಲ್ಲಿದ್ದಾಗ ತಾಯಿ ತಯಾರಿಸುವ ವಾರಣ್-ಭಾತ್, ಆಲೂಗಡ್ಡೆ ಭಾಜಿ ಹಾಗೂ ಸೀಗಡಿ ಭಾಜಿಯನ್ನು ತಾವು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಆಹಾರವನ್ನು ಚಮಚದ ಬದಲು ಕೈಯಿಂದಲೇ ಸವಿಯುವುದು ಉತ್ತಮ ಎಂದು ಸಲಹೆ ನೀಡಿರುವ ಅವರು, ತಾಯಿಯ ಕೈರುಚಿಯನ್ನು ಬೇರೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಸಾಂಪ್ರದಾಯಿಕ ಮಹಾರಾಷ್ಟ್ರ ಭಕ್ಷ್ಯಗಳಲ್ಲದೆ ಜಪಾನೀಸ್ ಸುಶಿ ಎಂದರೆ ತಮಗೆ ಬಹಳ ಇಷ್ಟ ಎಂದು ಸಚಿನ್ ತಿಳಿಸಿದ್ದಾರೆ.




