ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕ್ರೀಡೆ

Cricket: 7 ದಿನಗಳಲ್ಲಿ ಕೊಹ್ಲಿ 5 ದಾಖಲೆಗಳು ಉಡೀಸ್‌: ದಾಖಲೆ ಪುಟ ಸೇರಿದ 5 ಆಟಗಾರರು!

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರ ದಾಖಲೆಗಳನ್ನು ಮುರಿಯುವುದು ಕಷ್ಟ ಎಂದು ಭಾವಿಸಲಾಗಿತ್ತು. ಆದರೆ ಕೇವಲ 7 ದಿನಗಳಲ್ಲಿ ಶುಭಮನ್ ಗಿಲ್, ಇಶಾನ್ ಕಿಶನ್ ಸೇರಿದಂತೆ 5 ಯುವ ಭಾರತೀಯ ಆಟಗಾರರು ಕೊ...

Cricket: 7 ದಿನಗಳಲ್ಲಿ ಕೊಹ್ಲಿ 5 ದಾಖಲೆಗಳು ಉಡೀಸ್‌: ದಾಖಲೆ ಪುಟ ಸೇರಿದ 5 ಆಟಗಾರರು!
ಹಂಚಿಕೊಳ್ಳಿ:

ಇಂಡಿಯನ್‌ ಟೀಂ ರನ್‌ ಮಷಿನ್‌, ಚೇಸ್‌ ಮಾಸ್ಟರ್‌ ವಿರಾಟ್ ಕೊಹ್ಲಿ 2024 ರಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ ಈ ಅವಧಿಯಲ್ಲಿ ಅನೇಕ ದಾಖಲೆ ಸೃಷ್ಟಿಸಿದ್ದಾರೆ. ವಿರಾಟ್ ನಿವೃತ್ತರಾದಾಗ, ಅವರ ಈ ದಾಖಲೆಗಳನ್ನು ಸುಲಭವಾಗಿ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದ 7 ದಿನಗಳಲ್ಲಿ ವಿರಾಟ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ದಾಖಲೆಗಳನ್ನು ಉಡೀಸ್‌ ಮಾಡಿದ್ದಾರೆ.

ಯಾರು ಆ 5 ಪ್ರತಿಭೆಗಳು!

ಕಳೆದ ವಾರ ಕ್ರಿಕೆಟ್‌ನಲ್ಲಿ ಕೊಹ್ಲಿ 5 ದಾಖಲೆಗಳನ್ನು ಇಂಡಿಯನ್‌ ಬ್ಯಾಟ್ಸಮನ್‌ಗಳೇ ಹಿಂದಿಕ್ಕಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರೆಲ್ಲ ವಿರಾಟ್ ತಮ್ಮ ಆದರ್ಶ ಎಂದು ಪರಿಗಣಿಸಿದವರೆ ಆಗಿದ್ದಾರೆ. ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ಶುಭಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದರು. ಗಿಲ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 334 ರನ್ ಗಳಿಸಿದರು. ಶುಭಮನ್ ಗಿಲ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊದಲಿಗೆ ಇಶಾನ್‌ ಕಿಶಾನ್!

ಟೀಮ್ ಇಂಡಿಯಾದ ವೇಗಿ ಇಶಾನ್ ಕಿಶನ್ ವಿರಾಟ್ ಕೊಹ್ಲಿ ಅವರ 10 ವರ್ಷಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇಶಾನ್ 2026 ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 1,644 ರನ್ ಗಳಿಸಿದ್ದಾರೆ. 2016 ರಲ್ಲಿ ಕೊಹ್ಲಿ ಗಳಿಸಿದ 1614 ರನ್‌ಗಳ ದಾಖಲೆಯನ್ನು ಇಶಾನ್ ಮುರಿದಿದ್ದಾರೆ. ಇದರೊಂದಿಗೆ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ಭಾರತೀಯ ಆಟಗಾರ ಇಶಾನ್ ಕಿಶನ್ ಆಗಿದ್ದಾರೆ.

ಶ್ರೇಯಸ್‌ ದಾಖಲೆ ಏನು?

ಲಕ್ನೋದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ 43 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರು. ಇದರೊಂದಿಗೆ ಭಾರತ ಕೇವಲ 14.4 ಓವರ್‌ಗಳಲ್ಲಿ 172 ರನ್‌ಗಳ ಗುರಿಯನ್ನು ದಾಟಿತು. ಈ ಇನ್ನಿಂಗ್ಸ್‌ನೊಂದಿಗೆ, ಶ್ರೇಯಸ್ ಅಯ್ಯರ್ ಯಶಸ್ವಿ ಟಿ20ಐ ರನ್ ಚೇಸ್‌ನಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮೊದಲು, ವಿರಾಟ್ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 94 ರನ್ ಗಳಿಸಿದ್ದರು.

ಅಭಿಷೇಕ ಶರ್ಮಾ ದಾಖಲೆ ಏನು?

ಜಪಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 61 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 7 ಸಿಕ್ಸರ್‌ಗಳನ್ನು ಬಾರಿಸಿದರು, ಇದರೊಂದಿಗೆ ಅಭಿಷೇಕ್ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ 14 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಅವರ 11 ಸಿಕ್ಸರ್‌ಗಳ ದಾಖಲೆಯನ್ನು ಅಭಿಷೇಕ್ ಹಿಂದಿಕ್ಕಿದ್ದಾರೆ.

ತಿಲಕವರ್ಮಾ ರೆಕಾರ್ಡ್‌ ಏನು?

ಏಷ್ಯನ್ ಕ್ರೀಡಾಕೂಟದ ಫೈನಲ್‌ನಲ್ಲಿಯೇ ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ಪಾಕಿಸ್ತಾನ ವಿರುದ್ಧದ 5 ಟಿ20 ಇನ್ನಿಂಗ್ಸ್‌ಗಳಲ್ಲಿ ತಿಲಕ್ 103 ಸರಾಸರಿಯಲ್ಲಿ 206 ರನ್ ಗಳಿಸಿದ್ದಾರೆ. ಕಳೆದ ವಾರದಲ್ಲಿ, ಈ ಐವರು ಭಾರತೀಯ ಆಟಗಾರರು ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 5 ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಬರೆದರು.

ಹಂಚಿಕೊಳ್ಳಿ: